೧,ಕೊಟಿ ವೆಚ್ಚದ ಆರೋಗ್ಯ ಸಿಬ್ಬಂದಿಗಳಿಗೆ ವಸತಿ ಕಟ್ಟಡಕ್ಕೆ ಶಂಕುಸ್ಥಾಪನೆ

????????????????????????????????????

ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪ್ರಥಮ ಆಧ್ಯತೆಃರಾಜಾವೆಂಕಟಪ್ಪನಾಯ
ಮಾನ್ವಿ, ಃ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆಧ್ಯತೆ ಕಲ್ಪಿಸಲು ಸಕಲ ವ್ಯವಸ್ಥೆಗೆ ಸಾಕಾಷ್ಟು ಅನುದಾನ ಒದಗಿಸಿರುವುದಾಗಿ ಶಾಸಕ ರಾಜಾವೆಂಕಟಪ್ಪನಾಯಕ ಹೇಳಿದರು.
ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಶನಿವಾರ ೨೦೧೯-೨೦ ನೇ ಸಾಲಿನಲ್ಲಿ ಆರೋಗ್ಯ ಇಲಾಖೆಯ ಎಸ್‌ಟಿಪಿ ಯೋಜನೆಯಡಿಯಲ್ಲಿ ೧.ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ವಸತಿ ನಿಲಯಗಳ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.
ಹಿರೇಕೊಟ್ನೆಕಲ್ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುವ ಕೇಂದ್ರ ಇದಾಗಿದ್ದು ಇಲ್ಲಿನ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಂದ ಸಕಾಲಕ್ಕೆ ಆರೋಗ್ಯ ದೊರಕಿಸುವ ಹಿತದೃಷ್ಠಿಯಿಂದ ಸಿಬ್ಬಂದಿಗಳಿಗೆ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಹಿರೇಕೊಟ್ನೆಕಲ್ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ಸಿ.ಸಿ. ರಸ್ತೆ ನಿರ್ಮಾಣ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಮಾನ್ವಿ ಪಟ್ಟಣದಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ನಾನಾ ರೀತಿಯ ಸಮಸ್ಯೆಗಳನ್ನು ಪರಿಗಣಿಸಿ ಈ ಆಸ್ಪತ್ರೆಯಲ್ಲಿನ ಡಯಾಲಿಸಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ರೋಗಿಗಳಿಗೆ ಡಯಾಲಿಸಸ್ ಚಿಕಿತ್ಸೆ ವೇಳೆ ವಿದ್ಯುತ್‌ನ ತಾಪತ್ರಯ ತಪ್ಪಿಸುವ ಉದ್ದೇಶದಿಂದ ಎರಡು ಜನರೇಟರ್‌ಗಳ ಸೌಲಭ್ಯ ನೀಡಲಾಗಿದೆ. ಎಲ್ಲಾ ವಿಧದ ರೋಗಗಳ ತಪಾಸಣೆ ಮಾಡುವ ವೈಧ್ಯರ ನೇಮಕ ಹಾಗೂ ಶುದ್ದ ಕುಡಿಯುವ ನೀರಿನ ಘಟಕ, ಕಂಪೌಂಡ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಂಪೂರ್ಣಗೊಂಡಿದ್ದು ಅದಷ್ಟು ಬೇಗ ಉದ್ಘಾಟನೆ ಮಾಡಿ ರೋಗಿಗಳ ಚಿಕಿತ್ಸೆ ಅನುವು ಮಾಡಿಕೂಡಲಾಗುತ್ತದೆ ಎಂದು ಹೇಳಿದ ಶಾಸಕರು ಪಟ್ಟಣದಲ್ಲಿ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಕೇಂದ್ರಗಳ ಪ್ರಾರಂಭ ಹಾಗೂ ಉನ್ನತ ಚಿಕಿತ್ಸೆಗೆ ಅವಕಾಶಗಳ ಸೇವೆಗೆ ಮುಂದಾಗುವುದಾಗಿ ಎಂದರು.
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಸರ್ಕಾರಿ ವೈದ್ಯರು, ಸಿಬ್ಬಂದಿಗಳು ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ವೈಧ್ಯರ ೨೪ ಗಂಟೆಗಳ ನಿರಂತರ ಸೇವೆಯಿಂದ ನಾವುಗಳು ಕೋವಿಡ್-೧೯ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವೈಧ್ಯರ ಸೇವೆಯನ್ನು ರಾಜಾವೆಂಕಟಪ್ಪನಾಯಕ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಮುಖಂಡ ರಾಜಾರಾಮಚಂದ್ರನಾಯಕ, ವೆಂಕಟನರಸಿಂಹಗೌಡ, ಗೋಪಾಲನಾಯಕ ಹರವಿ, ಖಲೀಲ್ ಖುರೇಶಿ, ಬಸವರಾಜ ಶೆಟ್ಟಿ, ಇಸ್ಮಾಯಿಲ್‌ಸಾಬ್, ಮೌಲಾಸಾಬ್, ನಾರಾಯಣದೇಸಾಯಿ, ಬಸನಗೌಡ ಪೋಲೀಸ್ ಪಾಟೀಲ್, ಪಂಪಣ್ಣಗೌಡ, ರಾಮನಗೌಡ, ದೇವಪ್ಪಗೌಡ, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರಯ್ಯಸ್ವಾಮಿ, ಡಾ.ಚಂದ್ರಶೇಖರ, ಗುತ್ತೇದಾರ ಜಾಕೀರ್ ಮೊಹೀನುದ್ದೀನ್, ಚನ್ನಪ್ಪಗೌಡ, ಗುರುರಾಜ ಕುಲಕರ್ಣಿ, ಬುಡ್ಡಪ್ಪನಾಯಕ, ದೇವಪ್ಪಗೌಡ, ಮಹಾದೇವಪ್ಪನಾಯಕ, ಪಂಪಣ್ಣ ದೊರೆ, ರಾಜುಗೌಡ,ಸುರೇಶ, ನಾಗರೆಡ್ಡಿ, ಅಮರೇಶನಾಯಕ, ದತ್ತೇತ್ರೇಯ ವಕೀಲ, ಪ್ರಕಾಶರೆಡ್ಡಿ, ಜೆಇ ಖಾಜಾಸಾಬ್ ಇದ್ದರು.
(ಫೋಟೋ ಕ್ಯಾಫ್ಸನ್ ೧೪ಮಾನ್ವಿ೧- ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ೧.ಕೊಟಿ ವೆಚ್ಚದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಶಾಸಕ ರಾಜಾವೆಂಕಟಪ್ಪನಾಯಕ ಶಂಕುಸ್ಥಾಪನೆ ನೇರವೇರಿಸಿದರು.

ಶಾಸಕ ಆರ್‌ವಿಎನ್‌ರಿಂದ ಕುಡಿಯುವ ನೀರಿನ ಘಟಕ ಉದ್ಘಾಟನೆ
ಮಾನ್ವಿ, ಃ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ರಾಜಾವೆಂಕಟಪ್ಪನಾಯಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಮತ್ತು ಜನರ ಆರೋಗ್ಯವನ್ನು ಕಾಪಾಡುವ ಹಿತದೃಷ್ಠಿಯಿಂದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲಕ ಕಲ್ಪಿಸಲಾಗುತ್ತದೆ ಎಂದರು.
ಈ ವೇಳೆ ಜೆಡಿಎಸ್ ರಾಜ್ಯ ಯುವ ಮುಖಂಡ ರಾಜಾರಾಮಚಂದ್ರನಾಯಕ, ವೆಂಕಟನರಸಿಂಹಗೌಡ, ಗೋಪಾಲನಾಯಕ ಹರವಿ, ಖಲೀಲ್ ಖುರೇಶಿ, ಬಸವರಾಜ ಶೆಟ್ಟಿ, ಇಸ್ಮಾಯಿಲ್‌ಸಾಬ್, ಮೌಲಾಸಾಬ್, ನಾರಾಯಣದೇಸಾಯಿ, ಬಸನಗೌಡ ಪೋಲೀಸ್ ಪಾಟೀಲ್, ಪಂಪಣ್ಣಗೌಡ, ರಾಮನಗೌಡ, ದೇವಪ್ಪಗೌಡ, ಚನ್ನಪ್ಪಗೌಡ, ಗುರುರಾಜ ಕುಲಕರ್ಣಿ, ಬುಡ್ಡಪ್ಪನಾಯಕ, ದೇವಪ್ಪಗೌಡ, ಮಹಾದೇವಪ್ಪನಾಯಕ, ಪಂಪಣ್ಣ ದೊರೆ, ರಾಜುಗೌಡ,ಸುರೇಶ, ನಾಗರೆಡ್ಡಿ, ಅಮರೇಶನಾಯಕ, ದತ್ತೇತ್ರೇಯ ವಕೀಲ, ಪ್ರಕಾಶರೆಡ್ಡಿ ಇದ್ದರು.
(ಫೋಟೋ ಕ್ಯಾಫ್ಸನ್ ೧೪ಮಾನ್ವಿ೨- ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ರಾಜಾವೆಂಕಟಪ್ಪನಾಯಕ ಉದ್ಘಾಟಿಸಿದರು.


ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಯ್ಯನುಲಿಗೆ ಸನ್ಮಾನ
ಮಾನ್ವಿ, ಃ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಗಾಯಕ ಅಂಬಯ್ಯನುಲಿಯವರನ್ನು ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಚ್.ಶರ್ಪುದ್ದೀನ್ ಪೋತ್ನಾಳ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಒಕ್ಕೂಟದ ಪ್ರಧಾನಕಾರ್ಯದರ್ಶಿ ರಾಜು ತಾಳಿಕೋಟೆ, ಬಿ.ವಿ.ರೆಡ್ಡಿ, ಕೆ.ಈ.ನರಸಿಂಹ, ಡಾ.ರಾಜಶೇಖರ, ಎಂ.ಎ.ಎಚ್.ಮುಕೀಂ, ಡಿ.ವಿ.ಪ್ರಕಾಶ, ಎಂ.ಎಂ.ಹಿರೇಮಠ, ಭೀಮರಾಯ ಶೀತಿಮನಿ, ಹೆಚ್.ಆಂಜನೇಯ್ಯ, ಸರಿತಾ ಜೈನ್, ಮಹ್ಮದ್ ರಫಿ ಸೇರಿದಂತೆ ಇನ್ನಿತರರಿದ್ದರು.
(ಫೋಟೋ ಕ್ಯಾಫ್ಸನ್ ೧೪ಮಾನ್ವಿ೩- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಗಾಯಕ ಅಂಬಯ್ಯನುಲಿಯವರನ್ನು ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಪುದ್ದೀನ್ ಪೋತ್ನಾಳ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ತಾ,ಖಾ,ಶಿ,ಸಂ,ಒಕ್ಕೂಟದಿಂದ ಅಮಾನುಲ್ಲಾ ಮತವಾಲೆಗೆ ಸನ್ಮಾನ
ಮಾನ್ವಿ, ಃ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೪ನೇ ರ್‍ಯಾಂಕ್ ಗಳಿಸಿರುವ ವಿದ್ಯಾರ್ಥಿ ಸೈಯದ್ ಅಮಾನುಲ್ಲಾ ಹುಸೇನಿ ಮತವಾಲೆ ಇವರನ್ನು ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಪುದ್ದೀನ್ ಪೋತ್ನಾಳ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಒಕ್ಕೂಟದ ಪ್ರಧಾನಕಾರ್ಯದರ್ಶಿ ರಾಜು ತಾಳಿಕೋಟೆ, ಬಿ.ವಿ.ರೆಡ್ಡಿ, ಶೇಖ್ ಫರೀದ್ ಉಮ್ರಿ, ಕೆ.ಈ.ನರಸಿಂಹ, ಡಾ.ರಾಜಶೇಖರ, ಎಂ.ಎ.ಎಚ್.ಮುಕೀಂ, ಡಿ.ವಿ.ಪ್ರಕಾಶ, ಎಂ.ಎಂ.ಹಿರೇಮಠ, ಭೀಮರಾಯ ಶೀತಿಮನಿ, ಹೆಚ್.ಆಂಜನೇಯ್ಯ, ಸರಿತಾ ಜೈನ್, ಮಹ್ಮದ್ ರಫಿ, ಆಲಂಖಾನ್, ಎಂ.ಡಿ.ಆರೂನ್, ಶರಣಬಸವ, ಮೇಘನಾ, ಅಖಿಲೇಶ ಕುರ್ಡಿ ಸೇರಿದಂತೆ ಇನ್ನಿತರರಿದ್ದರು.
(ಫೋಟೋ ಕ್ಯಾಫ್ಸನ್ ೧೪ಮಾನ್ವಿ೪- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೪ನೇ ರ್‍ಯಾಂಕ್ ಗಳಿಸಿರುವ ವಿದ್ಯಾರ್ಥಿ ಸೈಯದ್ ಅಮಾನುಲ್ಲಾ ಹುಸೇನಿ ಮತವಾಲೆ ಇವರನ್ನು ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಸನ್ಮಾನಿಸಿ ಗೌರವಿಸಲಾಯಿತು.


ಕೆ.ವನಿತಾ ಭಜಂತ್ರಿ ನಾಮ ನಿರ್ದೇಶನ
ಮಾನ್ವಿ, ಃ ರಾಯಚೂರು ಜಿಲ್ಲೆಯ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯಗಳ ಜಿಲ್ಲಾ ಅನುಷ್ಠಾನ ಸಮಿತಿಗೆ ಕೆ.ವನಿತಾ ಬಸವರಾಜ ಭಜಂತ್ರಿ ನೇಮಕ ಮಾಡಿ ಆದೇಶಿಸಲಾಗಿದೆ.
ಅಭಿನಂದನೆ ಃ ರಾಯಚೂರು ಜಿಲ್ಲೆಯ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯಗಳ ಜಿಲ್ಲಾ ಅನುಷ್ಠಾನ ಸಮಿತಿಗೆ ಕೆ.ವನಿತಾ ಭಜಂತ್ರಿ ನೇಮಕ ಮಾಡಲು ಕಾರಣೀಭೂತರಾದ ಶಾಸಕ ರಾಜಾವೆಂಕಟಪ್ಪನಾಯಕ, ಅಲೆಮಾರಿ ಬುಡಕಟ್ಟು ಸಮುದಾಯಗಳ ರಾಜ್ಯ ಮುಖಂಡರು, ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು, ಪದಾಧಿಕಾರಿಗಳಿಗೆ ಮುಖಂಡ ಬಸವರಾಜ ಭಜಂತ್ರಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
(ಫೋಟೋ ಕ್ಯಾಫ್ಸನ್ ೧೪ಮಾನ್ವಿ೫- ಕೆ.ವನಿತಾ ಬಸವರಾಜ ಭಜಂತ್ರಿ ಫೋಟೋ.


ವಿಶ್ವನಾಥಪಾಟೀಲ್ ತೋರಣದಿನ್ನಿಗೆ ’ಸಹಕಾರ ರತ್ನ’ ಪ್ರಶಸ್ತಿ ಪ್ರದಾನ
ಮಾನ್ವಿ, ಃ ಬೆಂಗಳೂರುನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿ. ಏರ್ಪಡಿಸಿದ್ದ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ಸರ್ಕಾರ ೨೦೨೦-೨೧ನೇ ಸಾಲಿನ ’ಸಹಕಾರ ರತ್ನ’ಪ್ರಶಸ್ತಿಯನ್ನು ಸಹಕಾರ ಧುರೀಣ ಹಾಗೂ ಆರ್‌ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ವಿಶ್ವನಾಥಪಾಟೀಲ್ ತೋರಣದಿನ್ನಿ ಇವರಿಗೆ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಕಂದಾಯ ಸಚಿವ ಆರ್.ಅಶೋಕ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ, ಶಾಸಕ ಎಸ್.ಆರ್.ವಿಶ್ವನಾಥ ಸೇರಿದಂತೆ ಸಹಕಾರ ಮಂಡಳಿ ಆಯುಕ್ತರು, ಅಧಿಕಾರಿಗಳು ಇದ್ದರು.
(ಫೋಟೋ ಕ್ಯಾಫ್ಸನ್ ೧೪ಮಾನ್ವಿ೬- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ’ಸಹಕಾರ ರತ್ನ’ಪ್ರಶಸ್ತಿಯನ್ನು ಸಹಕಾರ ಧುರೀಣ ಹಾಗೂ ಆರ್‌ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ವಿಶ್ವನಾಥಪಾಟೀಲ್ ತೋರಣದಿನ್ನಿ ಇವರಿಗೆ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.