ಹ ಬೊಹಳ್ಳಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಹಗರಿಬೊಮ್ಮನಹಳ್ಳಿ :ನ.08 ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಪರಸಭೆ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕವಿತಾ ವಿಜಯಕುಮಾರ್ ಹಾಲ್ದಾಳ್ ಮತ್ತು ಉಪಾಧ್ಯಕ್ಷ ಹುಳ್ಳಿ ಮಂಜುನಾಥ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಆಯ್ಕೆಯಾಗಿದ್ದಾರೆ.
ಏಳು ತಿಂಗಳ ಅಧಿಕಾರ ಅವಧಿಗೆ ಶನಿವಾರ ನಡೆದ ಪುರಸಭೆ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಕವಿತಾ ವಿಜಯಕುಮಾರ್ ಹಾಲ್ದಾಳ್ ನಾಮಪತ್ರ ಸಲ್ಲಿಸಿದರು.ಬಿಜೆಪಿ ಪರವಾಗಿ ಪಕ್ಷೇತರ ಅಭ್ಯರ್ಥಿ ಸಂಜೋತ ನವೀನ ನಾಮಪತ್ರ ಸಲ್ಲಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪರ ಹುಳ್ಳಿ ಮಂಜುನಾಥ ಬಿಜೆಪಿ ಪರ ಜೋಗಿ ಹನುಮಂತ ನಾಮಪತ್ರ ಸಲ್ಲಿಸಿದ್ದರು.23 ಸದಸ್ಯರ ಸಂಖ್ಯಾಬಲವುಳ್ಳ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳೆ ಉಪಾಧ್ಯಕ್ಷ ಎಸ್‍ಟಿ ಮೀಸಲಾಗಿತ್ತು.ಕೈ ಎತ್ತುವ ಮೂಲಕ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕವಿತಾ ವಿಜಯಕುಮಾರ್ ಹಾಲ್ದಾಳ್‍ಗೆ ಹಾಗೂ ಹುಳ್ಳಿ ಮಂಜುನಾಥಗೆ ಶಾಸಕ ಭೀಮನಾಯ್ಕ ಸೇರಿ 12 ಮತಗಳು ಲಭಿಸಿದರೆ, ಬಿಜೆಪಿಯ ಸಂಜೋತ ನವೀನ ಹಾಗೂ ಜೋಗಿ ಹನುಮಂತಗೆ 10 ಮತಗಳು ದೊರೆತವು
ಚುನಾವಣಾಧಿಕಾರಿಯಾದ ತಹಶೀಲ್ದಾರ್ ಶರಣವ್ವ ನೂತನ ಅಧ್ಯಕ್ಷೆ-ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.ಈ ಚುನಾವಣೆ ಮಾಜಿ-ಹಾಲಿ ಶಾಸಕರ ನಡುವೆ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿತ್ತು.ಪುರಸಬೆ ಸುತ್ತ ಮುತ್ತಾ ಪೊಲೀಸರು ಬಿಗಿ ಬಂದ್‍ಬಸ್ತು ಮಾಡಲಾಗಿತ್ತು.ಆದರೂ ಕೆಲವು ಸಮಯ ಪರಸಭೆ ಮುಂದೆ ಎರಡು ಪಕ್ಷದ ಕಾರ್ಯಕರ್ತರು ಕೂಗಾಡುವ ಮೂಲಕ ಉದ್ವಿಗ್ಧ ಪರಿಸ್ಥತಿ ನಿರ್ಮಾಣವಾಗಿತ್ತು. ಡಿವೈಎಸ್‍ಪಿ ಹಾಗೂ ಸಿಪಿಐ ಮತ್ತು ಸಿಬ್ಬಂದಿ ವರ್ಗ ಕಾರ್ಯಕರ್ತರನ್ನು ಚದರಿಸುವ ಮೂಲಕ ತಿಳಿಗೊಳಿಸಿದರು.