ಹ್ಯಾಳ್ಯಾ ಗ್ರಾಮಪಂಚಾಯಿತಿ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ದಾರ

ಕೊಟ್ಟೂರು ನ.02:ತಾಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿಇರುವ
ಹ್ಯಾಳ್ಯಾ ಗ್ರಾಮದಲ್ಲಿ ಅಭಿವೃದ್ದಿಕಾಣದ ಹಿನ್ನಲೆಯಲ್ಲಿ ಮುಂಬರುವ ಗ್ರಾಮಪಂಚಾಯಿತಿ ಚುನಾವಣೆಯಲ್ಲಿಮತದಾನ ಮಾಡುವ ಪ್ರಶ್ನೆಯೆ ಇಲ್ಲ ಎಂದಿರುವ ಹ್ಯಾಳ್ಯಾಗ್ರಾಮಸ್ಥರು ಸಾಮೂಹಿಕವಾಗಿ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.ಈ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರೆಲ್ಲ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರವನ್ನು ಪಠಿಸಿದ್ದಾರೆ. ಕ್ಷೇತ್ರದಶಾಸಕ ಎಸ್. ಭೀಮಾನಾಯ್ಕ, ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಎಷ್ಟುಭಾರಿಮನವಿ ಸಲ್ಲಿಸಿದರು ಕೇಳುವ ಸ್ಥಿತಿ ಇಲ್ಲದ ಜನಪ್ರತಿನಿಧಿಗಳು ಈ ಕಾರಣಕ್ಕಾಗಿತಮ್ಮ ನಿರ್ಧಾರಕ್ಕೆ ಬಂದಿರುವುದಾಗಿ ಕಾಂಗ್ರಸ್ ಪಕ್ಷದ ಮುಖಂಡಗದ್ಗಿ ಹಳ್ಳಿ ವಾಸು ತಿಳಿಸಿದರು.