ಹ್ಯಾಟ್ರಿಕ್ ಬಾರಿಸಿ ಮಡದಿಯನ್ನು ಗ್ರಾ.ಪಂ ಕರೆತಂದ ವಿರೇಶ ಸಾಹುಕಾರ.

ಸಿರವಾರ.ಜ.೦೪-ಸತತವಾಗಿ ಮೂರು ಬಾರಿ ಗೆದ್ದು, ಮಡದಿಯನ್ನು ಗ್ರಾ.ಪಂ.ಗೆ ಕರೆತರುವ ಮೂಲಕ ಮತದಾರರ ಪ್ರೀತಿಗೆ ಪಾತ್ರರಾಗಿದ್ದಾರೆ. ತಾಲೂಕಿನ ಚಾಗಭಾವಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಡದಿನ್ನಿ ಗ್ರಾಮದ ಪತಿ- ಪತ್ನಿ ಇಬ್ಬರನ್ನೂ ಮತದಾರರು ಗೆಲ್ಲಿಸುವ ಮೂಲಕ ಪಂಚಾಯತಿಗೆ ಕಳಿಸಿದ್ದಾರೆ. ಕಡದಿನ್ನಿ ಗ್ರಾಮದ ವಾರ್ಡ ನಂ ೧ ರಲ್ಲಿ ಮತದಾರ ಒತ್ತಾಯಕ್ಕೆ ಬಿದ್ದೂ ಪತ್ನಿ ಕವಿತಾ ಅವರನ್ನು ಸ್ಪರ್ಧಿಸಿದ ೨೫೮ ಮತಗಳನ್ನು ಪಡೆದು ಪಂಚಾಯತಿಗೆ ಕರೆದುಕೊಂಡು ಹೊದರೆ, ವಾರ್ಡ ನಂ೨ರಲ್ಲಿ ೩೪೦ ಮತಗಳನ್ನು ಪಡೆ ಸತತವಾಗಿ ಮೂರು ಬಾರಿ ಗೆದ್ದಿದ್ದಾರೆ.
ಈ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ವಿರೇಶ ಸಾಹುಕಾರ ಕಳೆದ ಎರಡು ಬಾರಿ ಮತದಾರರು ನನಗೆ ಗೇಲುವು ನೀಡಿದ್ದರು, ಈ ಬಾರಿ ನನ್ನ ಜೊತೆ ೧ ನೇ ವಾರ್ಡಿನಲ್ಲಿ ಪತ್ನಿಯನ್ನು ನಿಲ್ಲಿಸುವಂತೆ ಮತದಾರರು ಒತ್ತಾಯ ಮಾಡಿದ ನಿಲ್ಲಿಸಿ, ಅದಿಕ ಮತ ನೀಡಿ ಗೆಲಿಸುವ ಮೂಲಕ ಪಂಚಾಯತಿ ಮೆಟ್ಟಿಲು ಹತ್ತಿಸಿದ್ದಾರೆ. ಅವರ ನಿರೀಕ್ಷೆ ಚ್ಯುತಿ ಬರದಂತೆ ನಡೆದುಕೊಳುವ ಮೂಲಜ ಕೆಲಸ ಮಾಡುವೆ ಎಂದ.