ಹ್ಯಾಟ್ರಿಕ್ ಗೆಲುವು ಕ್ಷೇತ್ರದ ಜನರ ಜಯ: ಡಾ.ಎಸ್.ಎಸ್.ಪಾಟೀಲ್

ರಾಯಚೂರು,ಮೇ.೧೪- ವಿಧಾನಸಭಾ ಚುನಾವಣೆಯಲ್ಲಿ ಅದ್ದೂರಿಯಾಗಿ ಹ್ಯಾಟ್ರಿಕ್ ಜಯ ಸಾಧಿಸಿದ ಡಾ. ಶಿವರಾಜ ಎಸ್ ಪಾಟೀಲ್ ಅವರು ಹ್ಯಾಟ್ರಿಕ್ ಗೆಲುವು ಕ್ಷೇತ್ರದ ಜನರ ಜಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ನಗರ ಕ್ಷೇತ್ರದಲ್ಲಿ ಜನರ ಜೊತೆಗೆ ಸದಾ ಸಂಪರ್ಕದಲ್ಲಿದ್ದೇನೆ,ನನನ್ನು ಸೋಲಿಸಲು ಯಾರು ಎಸ್ಟೇ ಪ್ರಯತ್ನ ಪಟ್ಟರು ಜನರು ನನಗೆ ಆಶೀರ್ವಾದ ಮಾಡಿದ್ದಾರೆ, ಕ್ಷೇತ್ರದ ಜನರ ಸೇವೆಗೆ ಸದಾ ಸಿದ್ದ ಎಂದು ಶಾಸಕರಾದ ಡಾ. ಎಸ್ ಎಸ್ ಪಾಟೀಲ್ ತಿಳಿಸಿದರು.
ನಗರದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹಗಲಿರುಳು ನನ್ನ ಪರವಾಗಿ ಪಕ್ಷದ ಸಿದ್ದಂತಗಳ ಅನ್ವಯ ಕಾರ್ಯ ನಿರ್ವಹಿಸಿದ್ದಾರೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನ ಗೆಲುವಿಗೆ ಶ್ರಮಿಸಿದ ಸರ್ವರಿಗೂ, ವಿಶೇಷವಾಗಿ ಮತದಾರ ಪ್ರಭುಗಳಿಗೆ ಧನ್ಯವಾದಗಳು ತಿಳಿಸಿದರು.