ಹ್ಯಾಕಥಾನ್ ಸ್ಪರ್ಧೆಯಲ್ಲಿ ಜಿ ಎಂ ಐ ಟಿ ವಿದ್ಯಾರ್ಥಿಗಳಿಗೆ ಮೊದಲ ಬಹುಮಾನ 

 

ಸಂಜೆವಾಣಿ ವಾರ್ತೆ

ದಾವಣಗೆರೆ.ನ.೫; ನಗರದ  ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸಾಗರ್ ಪಾಟೀಲ್, ವರುಣ್ ಎಸ್ ಪಾಟೀಲ್ ಮತ್ತು ತುಷಾರ್ ಬಿ ಆರ್ ಆನ್ಲೈನ್ ಮೋಡ್ ನಲ್ಲಿ ನಡೆದ,  ಗೂಗಲ್ ಕಂಪನಿ ಪ್ರಾಯೋಜಿತ, ಹ್ಯಾಕ್ ಟು ಸ್ಕಿಲ್ ಆಯೋಜಿಸಿದ  “ಕೋಡ್ ವಿಥ್ ಮ್ಯಾಪ್ಸ್” ಎಂಬ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿರುತ್ತಾರೆ. ವಿವಿಧ ಕ್ಷೇತ್ರ ಹಾಗು ದೇಶಗಳಿಂದ  ಸುಮಾರು ಏಳು ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಜಿ ಎಂ ಐ ಟಿ ಕಾಲೇಜಿನ ವಿದ್ಯಾರ್ಥಿಗಳು ವೋಲ್ಟೇಜ್ ವೈಕಿಂಗ್ಸ್ ಎಂಬ ತಂಡದ ಮೂಲಕ ಪ್ರಸ್ತುತ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳ ಮೇಲಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಯೋಜನೆ ರೂಪಿಸಿ ಅದರ ಪ್ರೊಟೋಟೈಪ್ ಪ್ರದರ್ಶಿಸುವುದರ ಮೂಲಕ ಮೊದಲ ಬಹುಮಾನವಾಗಿ  1000 ಡಾಲರ್ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಛೇರ್ಮನ್  ಲಿಂಗರಾಜು ಜಿ ಎಂ, ಆಡಳಿತಾಧಿಕಾರಿಗಳಾದ ವೈ ಯು ಸುಭಾಷ್ ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ ಬಿ, ವಿಭಾಗದ ಮುಖ್ಯಸ್ಥರಾದ ಡಾ. ವೀರಪ್ಪ ಬಿ ಏನ್ ಮತ್ತು ಕಾಲೇಜಿನ ಹಾಕಥಾನ್ ಸಂಚಾಲಕರಾದ  ಮಾರುತಿ ಎಸ್ ಟಿ  ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳು ಈ ಪ್ರಾಜೆಕ್ಟ್ ಅನ್ನು ಪ್ರಾಧ್ಯಾಪಕರಾದ  ಕೊಟ್ರೇಶ್ ಎಸ್ ಎನ್  ಮಾರ್ಗದರ್ಶನದಲ್ಲಿ ನಡೆಸಿದ್ದರು.