ಹ್ಯಾಕಥಾನ್ ಆನ್‍ಲೈನ್ ಇವೆಂಟ್-2021ರಲ್ಲಿ ಭಾಗವಹಿಸಲು ಮುಕ್ತ ಆಹ್ವಾನ

ಕಲಬುರಗಿ,ಏ.16: ಕಲಬುರಗಿ ಮಹಾನಗರ ಪಾಲಿಕೆಯು ಮನೋಮಯ ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಗರದಲ್ಲಿ ಘನತ್ಯಾಜ ನಿರ್ವಹಣೆ, ಕರ ವಸೂಲಾತಿ, ನಗರದ ಪ್ರವಾಸೋದ್ಯಮ ಹಾಗೂ ಕಚೇರಿ ಆಡಳಿತ ಕ್ಷೇತ್ರದಲ್ಲಿ ಆನ್‍ಲೈನ್ ಮೂಲಕವೇ ಎಲ್ಲವು ವ್ಯವಹರಿಸುವ ಸಂಬಂಧ ಅರ್ಹ ಮತ್ತು ಆಸಕ್ತರಿಂದ ಹ್ಯಾಕಥಾನ್ ಆನ್‍ಲೈನ್ ಇವೆಂಟ್-2021ರಲ್ಲಿ ತಮ್ಮ ಅಭಿಪ್ರಾಯ ಮತ್ತು ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಪಾಲಿಕೆ ಮುಕ್ತ ಆಹ್ವಾನ ನೀಡಿದೆ.
ಮೊಟ್ಟ ಮೊದಲನೆಯದಾಗಿ ಮಹಾನಗರ ಪಾಲಿಕೆ ಇಂತಹ ಒಂದು ಹ್ಯಾಕಥಾನ್ ಆನ್‍ಲೈನ್ ಇವೆಂಟ್ ಆಯೋಜಿಸಿದ್ದು, ನಗರದ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು, ನಾಗರಿಕರು ಹಾಗೂ ಮಹತ್ವಾಕಾಂಕ್ಷೆವುಳ್ಳ ಆರಂಭಿಕರು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ಘನತ್ಯಾಜ ನಿರ್ವಹಣೆ, ಆನ್‍ಲೈನ್ ಮುಖಾಂತರ ಕರ ವಸೂಲಾತಿ, ನಗರದ ಪ್ರವಾಸೋದ್ಯಮ ಹಾಗೂ ಕಚೇರಿ ಆಡಳಿತದಲ್ಲಿ ಭೌತಿಕ ಕಾರ್ಯ ಹೊರತುಪಡಿಸಿ ಆನ್‍ಲೈನ್ ಮೂಲಕವೇ ಸಾರ್ವಜನಿಕರ ದೂರು-ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ನೆರವು ನೀಡುವ ಕುರಿತು ಪ್ರಸ್ತುತ ಪಾಲಿಕೆಯಲ್ಲಿ ಇರುವ ಮಾನವ ಸಂಪನ್ಮೂಲಗಳನ್ನೇ ಬಳಸಿಕೊಂಡು ಆರ್ಥಿಕ ಇತಿಮಿತಿಯಲ್ಲಿಯೇ ಕಾರ್ಯಾಗತಗೊಳಿಸುವ ಕಲ್ಪನೆಗಳನ್ನು ತಮ್ಮ ತಂಡದ ವಿವರದೊಂದಿಗೆ ಇ-ಮೇಲ್ ವಿಳಾಸ kalaburagihackathon@gmail.com ಗೆ ಏಪ್ರಿಲ್ 30 ರೊಳಗೆ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗೆ ಮೋಬೈಲ್ ಸಂ.7338641016ಗೆ ಸಂಪರ್ಕಿಸಲು ಕೋರಿದೆ.