ಹ್ಯಾಂಡ ಬಾಲ್ ಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ತಾಳಿಕೋಟೆ:ಆ.31: ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹ್ಯಾಂಡ ಬಾಲ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡುವದರೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

   ವಿಭಾಗ ಮಟ್ಟದ ಕ್ರೀಡೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲ, ಹಾಗೂ ಕಾರ್ಯದರ್ಶಿಗಳಾದ ಸಚಿನ ಎಚ್ ಪಾಟೀಲ, ರವಿ ಬಿ ಪಾಟೀಲ ಹಾಗೂ ಪ್ರೌಢಶಾಲೆಯ ಮುಖ್ಯಸ್ಥರಾದ ಅಶೋಕ ಕಟ್ಟಿ, ದೈಹಿಕ ಶಿಕ್ಷಕ ಎಮ್.ಎಸ್ ರಾಯಗೊಂಡ, ಎಚ್.ಎಸ್.ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಶಿವುಕುಮಾರ ನಾಯಕ, ಉಪನ್ಯಾಸಕರಾದ ಅಂಬರೀಶ ಜಾಲಿಬೆಂಚಿ, ಶರಣು ಬಿರಾದಾರ, ಶಿಕ್ಷಕರಾದ ಬಿ ಐ ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಚ್.ಬಿ.ಪಾಟೀಲ, ಎಸ್.ಸಿ.ಗುಡಗುಂಟಿ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಕೆ.ಎನ್.ನಾಲತವಾಡ ಅವರು ಅಭಿನಂದಿಸಿದ್ದಾರೆ.