ಹೋಳೂರು ಗ್ರಾಪಂ ಅಭ್ಯರ್ಥಿ ಹೇಮಾವತಿಗೆ ಗೆಲವು

ಕೋಲಾರ,ಜ.೬:ಕೋಲಾರ ತಾಲೂಕಿನ ಹೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದಾದಿರೆಡ್ಡಿಹಳ್ಳಿ ಗ್ರಾಮದ ಹೇಮಾವತಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು, ೬೩ ಮತಗಳಿಂದ ಜಯಶೀಲರಾಗುತ್ತಾರೆ.
ಹೇಮಾವತಿ ರವರನ್ನು ಹೋಳೂರು ಹೋಬಳಿ ಸವಿತಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ವತಿಯಿಂದ ದಾದಿರೆಡ್ಡಿಹಳ್ಳಿ ಗ್ರಾಮದ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ, ಈರೇಗೌಡ, ಮಾಜಿ ಸದಸ್ಯ ಮಂಜುನಾಥ್, ಚಂದ್ರಶೇಖರ್, ಮಂಜುನಾಥ, ಸವಿತಾ ಸಮಾಜದ ಹೋಳೂರು ಹೋಬಳಿ ಅಧ್ಯಕ್ಷರು ಎಚ್.ವಿ ನಾರಾಯಣಸ್ವಾಮಿ, ಉಪಾಧ್ಯಕ್ಷ ನಾರಾಯಣಪ್ಪ, ಜಡೇರಿ ನಾರಾಯಣಸ್ವಾಮಿ, ರಮೇಶ, ರಾಜೇಶ್, ಜಯರಾಮ್, ಮುನಿವೆಂಕಟಪ್ಪ, ಶ್ರೀರಾಮಪ್ಪ, ವಿನಯ್ ಚರಣ್, ಕೋಲಾರ ಮಿಲಿಟರಿ ವೆಂಕಟೇಶ್, ಆರಿಕೆರೆ ನಾಗರಾಜ್, ಸುಬ್ರಮಣಿ ಹಾಗೂ ಸಮಾಜದ ಮುಖಂಡರು ಹಾಜರಾಗಿದ್ದರು.