ಹೋಳಿ ಹುಣ್ಣಿಮೆ: ಕಾಮದೇವ ಪ್ರತಿಷ್ಠಾಪನೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.06: ಪಟ್ಟಣದ ರಾಘವೇಂದ್ರ ಮಠದ ಹತ್ತಿರದ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಕಾಮ ಪ್ರತಿಷ್ಟಾಪನೆ ಮಾಡಲಾಯಿತು.
ಪ್ರತಿವರ್ಷದಂತೆ ಈ ವರ್ಷದ ತ್ರಯೋದಶಿಯಂದು ಪಟ್ಟಣದ ಮೂರನೇ ವಾರ್ಡಿನ ಬ್ರಾಹ್ಮಣ ಸಮಾಜದ ಬಾಂಧವರು ಹಾಗೂ ವಾಲ್ಮೀಕಿ ಯುವಕರ ಸಂಘದವರು ಕಾಮದೇವರ ಪ್ರತಿಷ್ಟಾಪನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ಡಿ ನರಸಿಂಹ ಮೂರ್ತಿ, ಶ್ರೀಧರ್ ಶಾಸ್ತ್ರಿ, ಶ್ರೀರಾಮ ಶಾಸ್ತ್ರಿ, ಪ್ರಸಾದ್ ಜೋಶಿ, ಡಿ. ವಿಶ್ವನಾಥ, ಪ್ರಭಾಕರ್ ಭಟ್, ಶ್ರೀನಾಥ್ ಭಟ್, ಕೊಟ್ರೇಶ್ ಹಾಗೂ ಇತರರು ಇದ್ದರು.