ಹೋಳಿ ಹಬ್ಬ ಸೌಹಾರ್ದತೆಯಿಂದ ಕೂಡಿರಲಿ:ಪಿಎಸ್‍ಐ ಘೋರಿ

ತಾಳಿಕೋಟೆ:ಮಾ.20: ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿರುವ ತಾಳಿಕೋಟೆ ಪಟ್ಟಣವಾಗಿದೆ ಇಂತಹ ಪಟ್ಟಣದಲ್ಲಿ ಹೋಳಿ ಹಬ್ಬ ಮೊದಲಿನಂತೆ ಪ್ರೀತಿ ಮತ್ತು ಸೌಹಾರ್ದತೆಯ ಸಂಖ್ಯೇತದಿಂದ ಕೂಡಿ ಆಚರಿಸುವಂತಾಗಲಿ ಎಂದು ತಾಳಿಕೋಟೆ ಪೊಲೀಸ್ ಠಾಣಾ ಪಿ.ಎಸ್.ಐ ಮಹ್ಮದತೋಸಿಫ್ ಘೋರಿ ಅವರು ಹೇಳಿದರು.
ಬರಲಿರುವ ದಿ.25, 26, 27 ಈ ಮೂರು ದಿನಗಳ ಕಾಲ ಆಚರಿಸಲಾಗುವ ಹೋಳಿ ಹಬ್ಬದ ನಿಮಿತ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಂಗಳವಾರರಂದು ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಜಾತಿ, ಬೇದ, ಬಡವ, ಶ್ರೀಮಂತ ಎನ್ನದೇ ಎಲ್ಲರೂ ಕೂಡಿ ಆಚರಿಸುವಂತಹ ಹಬ್ಬ ಹೊಳಿ ಹಬ್ಬವಾಗಿದೆ ದಿ.25 ರಂದು ಕಾಮ ಧಹನ ನಡೆಯಲಿದ್ದು 26 ಮತ್ತು 27 ಈ ಎರಡು ದಿನಗಳ ಕಾಲ ರಂಗಿನಾಟ ಜರುಗಲಿದೆ ಕಾಮ ಧಹನವು ಆದಷ್ಟು ಬೇಗನ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು ರಾತ್ರಿ ಹೆಚ್ಚಾದಂತೆ ಕುಚೇಷ್ಠಿಗಳ, ಕುಡುಕರ ಪ್ರತಾಪದಿಂದ ಸಣ್ಣ ಪುಟ್ಟ ಅಹಿತಕರ ಘಟನೆ ನಡೆದರೂ ಕೂಡಾ ಎಲ್ಲರೂ ಜವಾಬ್ದಾರರಾಗಬೇಕಾಗುತ್ತದೆ ಇಂತಹ ಘಟನೆಗಳನ್ನು ತಪ್ಪಿಸಲು ಆದಷ್ಟು ಬೇಗನೆ ಕಾಮ ಧಹನ ಮಾಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದ ಅವರು ಮರುದಿನ ಬಣ್ಣ ದೋಕುಳಿ ಇರುವದರಿಂದ ಆದಷ್ಟು ಕಮಿಕಲ್ ರಹಿತ ಬಣ್ಣ ಉಪಯೋಗಿಸುವದು ಒಳಿತಾಗಿದೆ ಕೆಮಿಕಲ್ ಬಣ್ಣದಿಂದ ದೇಹಕ್ಕೆ ಹಾನಿಕರ ಉಂಟಾಗಲಿದೆ ಅಲ್ಲದೇ ಇಂತಹ ಸಂದರ್ಬದಲ್ಲಿ ಕಣ್ಣುಗಳಲ್ಲಿ ಕೆಮಿಕಲ್ ಬಣ್ಣ ಸೇರಿ ಕಣ್ಣುಗಳು ಸಹ ಹಾಳಾಗುವ ಸಂದರ್ಬ ಬರಬಹುದು ಮತ್ತು ತಲೆಯ ಮೇಲೆ ತತ್ತೆ ಒಡೆಯುವದು ಇನ್ನಿತರ ಹೊಲಸನ್ನು ಹಚ್ಚುವದು ಇಂತಹ ರೀತಿ ಆಟಗಳನ್ನು ಆಡದೇ ಪ್ರೀತಿ ಮತ್ತು ಸೌಹಾರ್ದತೆ ಮೂಡುವಂತೆ ಬಣ್ಣದಾಟವಾಗಿರಲಿ ಎಂದರು. ಇನ್ನೂ ಕೆಲವೆಡೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ಚಂದಾ ವಸೂಲಿ ಮಾಡಿದಂತಹ ಪ್ರಕರ್ಣಗಳು ಅಲಲ್ಲಿ ಬೆಳಕಿಗೆ ಬಂದಿವೆ ಅಂತಹ ಕೆಲಸಕ್ಕೆ ಯಾರೂ ಕೂಡಾ ಕೈ ಹಾಕಬಾರದು ಬಣ್ಣದಾಟ ಮುಗಿದ ನಂತರ ಹರಿದ ಅಂಗಿ ಮತ್ತು ಪ್ಯಾಂಟ್‍ಗಳನ್ನು ವಿದ್ಯುತ್ ವಾಯರ್ ಮತ್ತು ಇನ್ನಿತರ ವಾಯರ್‍ಗಳ ಮೇಲೆ ಎಸೆದು ಹೋಗುವಂತಹ ಕೆಲಸ ಮಾಡಬಾರದು ವಿದ್ಯುತ್ ಶ್ಯಾರ್ಟ ಸಕ್ರ್ಯೂಟ್‍ದಿಂದ ಅನೇಕಕಡೆಗಳಲ್ಲಿ ಅವಘಡ ಸಂಬವಿಸಿವೆ ಬಣ್ಣದಾಟದ ದಿನವಾದ ದಿ. 25 ರಿಂದ ಎಸ್.ಎಸ್.ಎಲ್.ಸಿ. ಪರಿಕ್ಷೆಗಳು ನಡೆಯುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಬಣ್ಣ ಹಚ್ಚುವದಾಗಲಿ ತೊಂದರೆ ಕೊಡವದಾಗಲಿ ಮಾಡಬಾರದು ಬಣ್ಣದಾಟ ಪ್ರೀತಿಯಿಂದ ಸ್ನೇಹದಿಂದ ಬಣ್ಣದಾಟದಲ್ಲಿ ತೊಡಗಿಕೊಳ್ಳುವವರೊಂದಿಗೆ ಆಡಬೇಕು ಯಾರಿಗೂ ಕೂಡಾ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಿ ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳಬೇಡಿ ರಾಧೆ-ಕೃಷ್ಣನ ಸ್ವರೂಪದಂತಿರುವ ಹೋಳಿ ಹಬ್ಬವು ಪ್ರೀತಿ ಪ್ರೇಮ ಭಾವೈಕ್ಯತೆಯನ್ನು ಮೂಡಿಸಲಿ ಎಂದರು.
ಇದೇ ಸಮಯದಲ್ಲಿ ಮುಖಮಡರುಗಳಾದ ವಿಜಯಸಿಂಗ್ ಹಜೇರಿ, ಜೈಭೀಮ ಮುತ್ತಗಿ, ರಾಘವೇಂದ್ರ ವಿಜಯಪುರ ಅವರು ಮಾತನಾಡಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಅಪರಾಧ ವಿಭಾಗದ ಪಿಎಸ್‍ಐ ಆರ್.ಡಿ.ಲಮಾಣೆ, ಮುಖಂಡರುಗಳಾದ ಎಂ.ಎಸ್.ಸರಶೆಟ್ಟಿ, ಡಿ.ಕೆ.ಪಾಟೀಲ, ಪುರಸಭಾ ಸದಸ್ಯ ಪರಶುರಾಮ ತಂಗಡಗಿ, ಅಣ್ಣಾಜಿ ಜಗತಾಪ, ಎಂ.ಎಸ್.ಮುರಾಳ, ಎಂ.ಎಸ್.ನಗಾರ್ಚಿ, ಸಿದ್ದನಗೌಡ ಪಾಟೀಲ(ನಾವದಗಿ), ಎ.ಎಂ.ಮಮದಾಪೂರ, ಎಂ.ಎಂ.ಬೇಪಾರಿ, ಶಫಿಕ್ ಇನಾಮದಾರ, ಎನ್.ಡಿ.ಮನಗೂಳಿ, ನಾಗರಾಜ ಬಳಿಗಾರ, ಶ್ರೀಮತಿ ಶಿವಮ್ಮ ಬಿರಾದಾರ, ಸಮರ್ಥ ಸಜ್ಜನ, ವಿಶ್ವನಾಥ ಮೈಲೇಶ್ವರ, ಜಗದೀಶ ಬಿಳೇಭಾವಿ, ಕಿರಣ ಬಡಿಗೇರ, ನಬಿರಸೂಲ ಲಾಹೋರಿ, ಅಶ್ಪಾಕ್ ಹುಣಶ್ಯಾಳ, ಕೂಡ್ಲಪ್ಪ ಚಿಗರಿ, ಶಶಿಕುಮಾರ ದೇಸಾಯಿ, ನಾಗರಾಜ ಪೂಜಾರಿ, ಗೋಪಾಲ ಕಟ್ಟಿಮನಿ, ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಸಿಬ್ಬಂದಿ ಸಂಗಮೇಶ ಚಲವಾದಿ ಸ್ವಾಗತಿಸಿ ನಿರೂಪಿಸಿದರು.