
ಲಕ್ಷ್ಮೇಶ್ವರ,ಮಾ.5: ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ಶಾಂತಿ ಸಭೆ ಜರುಗಿತು. ಸಭೆಯಲ್ಲಿ ಮಾತನಾಡಿದ ಪೂರ್ಣಜಿ ಕರಾಟೆ, ಸೋಮಣ್ಣ ದಾಣಗಲ್, ಗಂಗಾಧರ ಮೆಣಸಿನಕಾಯಿ, ಮುಕ್ತಿಯರ್ ಗದಗ್, ಅಂಬರೀಶ್ ತಂಬದಮನಿ, ಮುಂತಾದವರು ಹೋಳಿ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಿ ಹಬ್ಬದ ಮಹತ್ವವನ್ನು ಅರ್ಥೈಸಿಕೊಂಡು ಆಚರಣೆ ಮಾಡಬೇಕು ಎಂದರು. ಬಣ್ಣದ ಸಂದರ್ಭದಲ್ಲಿ ದೇಹಕ್ಕೆ ಹಾನಿಕಾರವಾದ ರಾಸಾಯನಿಕ ಬಣ್ಣಗಳನ್ನು ಬಳಸಬಾರದು ಎಂದು ಹೇಳಿದರು.
ಪಿಎಸ್‍ಐ ಡಿ ಪ್ರಕಾಶ್ ಅವರು ಮಾತನಾಡಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಯಾರೇ ಶಾಂತಿಭಂಗವಾಗುವ ಚಟುವಟಿಕೆಗಳನ್ನು ಮಾಡಿದರೆ ಕಾನೂನು ತನ್ನ ಕ್ರಮ ಜರುಗಿಸುತ್ತದೆ ಎಂದು ಹೇಳಿದರು. ಎಎಸ್‍ಐ ಎನ್‍ಎ ಮೌಲ್ವಿ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹಗ್ಗ ಕಟ್ಟಿ ಹಣ ವಸೂಲಿ ಮಾಡುವ ಸಂಗತಿಗಳು ವಿಡಿಯೋ ಮತ್ತು ಫೆÇೀನ್ ಕರೆಗಳು ಬಂದರೆ ಅಂತವರ ಮೇಲೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವುದಾಗಿಎಚ್ಚರಿಸಿದರು.
ಸಭೆಯಲ್ಲಿ ಮುದುಕಣ್ಣ ಗದ್ದಿ, ಹನುಮಂತ ಶರಶೂರಿ, ಪ್ರವೀಣ್ ಗಾಣಿಗೇರ್, ಫಕೀರೇಶ ಅಣ್ಣಿಗೇರಿ ,ಈರಣ್ಣ ಶಿಗ್ಲಿ, ಮಂಜುನಾಥ್ ಕೋಡಿಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.