ಹೋಳಿ ಹಬ್ಬ ಮೇಲೆ ಕೊರೊನ ಕರಿ ನೆರಳು

ವ್ಯಾಪಾರವಿಲ್ಲದ ಕಂಗಾಲಾದ ಬಣ್ಣ ವ್ಯಾಪಾರಸ್ಥರು
ರಾಯಚೂರು.ಮಾ.೨೮.ಹೋಳಿ ಹಬ್ಬದ ಮೇಲೆ ಕೊರೊನ ಕರಿನೆರಳು ಬಿದಿದ್ದು ಬಣ್ಣ ಮಾರಾಟ ಮಾಡುವವರಿಗೆ ಬರೆ ಎಳೆದಂತಾಗಿದೆ.
ಹಿಂದೂ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬವು ವರ್ಷದ ಕೊನೆಯ ಹಬ್ಬವಾಗಿದ್ದು ಪ್ರತಿವರ್ಷ ಜನರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಆಚರಿಸುತಿದ್ದರು ಈ ಬಾರಿ ಕೊರೊನ ಹಿನ್ನಲೆಯಲ್ಲಿ ಹೋಳಿ ಆಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನ ಎರಡನೇ ಅಲೆ ಪ್ರಾರಂಭವಾಗಿದ್ದು ಕೊರೊನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಿಂದ ಸರ್ಕಾರ ಹೋಳಿ ಸೇರಿದಂತೆ ಇನ್ನಿತರ ಹಬ್ಬಗಳನ್ನು ನಿಷೇಧಿಸಲಾಗಿದೆ.
ಕಳೆದ ಒಂದು ವಾರದಿಂದ ಮಾರಾಟಗಾರರು ವಿವಿಧ ಬಗೆಯ ಬಣ್ಣಗಳನ್ನು ತಂದಿದ್ದು ಆದರೆ ಯಾವುದೇ ವ್ಯಕ್ತಿಯು ಬಣ್ಣಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ.
ಕಳೆದ ವರ್ಷ ಕೊರೊನ ಪ್ರಾರಂಭವಾಗಿದ್ದರು ಗ್ರಾಹಕರು ಬಯಪಡದೆ ಹೋಳಿ ಹಬ್ಬವನ್ನು ಆಚರಿಸಲಾಯಿತು ಆದರೆ ಈ ಬಾರಿ ಯಾರು ಬಣ್ಣವನ್ನು ಖರೀದಿಸಲು ಮುಂದಾಗುತಿಲ್ಲ ಇದರಿಂದ ಬಣ್ಣ ಮಾರಾಟ ಮಾಡುತ್ತಿರುವವರಿಗೆ ಹೊಟ್ಟೆಯ ಮೇಲೆ ಬರೆ ಬಿದ್ದಂತಾಗಿದ್ದು,ಮುಂದೆ ಇದೆ ರೀತಿ ಯಾದರೆ ನಮ್ಮ ಬಣ್ಣ ಮಾರಾಟ ಮಾಡುತ್ತಿರುವವರ ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಅಳಲು ತೋಡಿಕೊಂಡರು.ಹೋಳಿ ಹಬ್ಬ ಮೇಲೆ ಕೊರೊನ ಕರಿ ನೆರಳು