ಹೋಳಿ ಹಬ್ಬ: ನೌಬಾದ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜರುಗಿದ ಶಾಂತಿ ಸಭೆ

ಬೀದರ:ಮಾ.24: ಹೋಳಿ ಹಬ್ಬ ಹಾಗೂ ಜಗನೆಕಿ ರಾತ್ ಪ್ರಯುಕ್ತ ಇಲ್ಲಿಯ ನೌಬಾದ್‍ನ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.

ಈ ಬಾರಿ ಹೋಳಿ ಹಬ್ಬ ಹಾಗೂ ಜಗನೆಕಿ ರಾತ್ ಎರಡೂ ಒಟ್ಟಿಗೆ ಬಂದಿವೆ. ಯಾರಿಗೂ ತೊಂದರೆ ಆಗದಂತೆ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು ಎಂದು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಸುವರ್ಣ ಮನವಿ ಮಾಡಿದರು.

ಹಬ್ಬ ಆಚರಣೆ ವೇಳೆ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಸಿಬ್ಬಂದಿ ಸತೀಶ್ ರಾಮಖಾನೆ, ಮಲ್ಲಿಕಾರ್ಜುನ, ಶಿವಾಜಿ, ಸಂಜೀವಕುಮಾರ ಇದ್ದರು. ಠಾಣೆ ವ್ಯಾಪ್ತಿಯ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.