ಹೋಳಿ ಹಬ್ಬ: ಜಿಲ್ಲೆಯ ವಿವಿಧೆಡೆ ಬಣ್ಣದೋಕುಳಿ

ಬೀದರ್:ಮಾ.9: ಹೋಳಿ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಬುಧವಾರೂ ರಂಗಿನಾಟ ನಡೆಯಿತು. ನಗರದಲ್ಲಿ ಮಹಿಳೆಯರು ಪ್ರತ್ಯೇಕವಾಗಿ ಹೋಳಿ ಹಬ್ಬ ಅಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು ನಗರದ ತಾಯಿ ಮಗು ವೃತ್ತದ ಬಳಿ ಬಣ್ಣ ಎರಚಾಡಿ ಸಂಭ್ರಮಿಸಿದರು.

ನ್ಯೂ ಆದರ್ಶ ಕಾಲೊನಿ:

ಹೋಳಿ ಪ್ರಯುಕ್ತ ಇಲ್ಲಿಯ ನ್ಯೂ ಆದರ್ಶ ಕಾಲೊನಿಯಲ್ಲಿ ಪುರುಷರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.
ಪ್ರಮುಖರಾದ ಕೆ.ಎಚ್. ಪಾಟೀಲ, ವೀರಕುಮಾರ ಮಜಗೆ, ಶಿವಕುಮಾರ ಉಪ್ಪೆ, ಸುನೀತಾ, ಸಂಗೀತಾ, ಆಶಾ ಮುದ್ದಾ ಮೊದಲಾದವರು ಪಾಲ್ಗೊಂಡಿದ್ದರು.

ಬಾವಗಿ:

ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ಸಂಸ್ಥಾನದಲ್ಲಿ ಸಂಭ್ರಮದಿಂದ ಯುವಕರು ಹೋಳಿ ಆಚರಿಸಿದರು ಪರಸ್ಪರ ಬಣ್ಣ ಹಚ್ಚಿ ಡಿಜೆ ಸೌಂಡ್ ಗೆ ಹೆಜ್ಜೆಹಾಕಿದರು

ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಲೋಕೇಶ ಕನಶಟ್ಟಿ, ಗುರು ಭದ್ರೇಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿ, ಓಂಕಾರ ಸ್ವಾಮಿ, ಆನಂದ ಸ್ವಾಮಿ, ರಾಜಕುಮಾರ ಸ್ವಾಮಿ, ಅವಿನಾಶ್ ಮುದ್ದಾ, ಆಕಾಶ, ನಾಗೇಶ ಇದ್ದರು.