ಹೋಳಿ ಹಬ್ಬ ಗಣ್ಯರ ಶುಭಾಶಯ

ನವದೆಹಲಿ, ಮಾ.೮-ಬಣ್ಣಗಳ ಹಬ್ಬವಾದ ಹೋಳಿಯನ್ನು ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.
ತಮ್ಮ ಟ್ವಿಟ್ ಮೂಲಕ ಶುಭಾ ಹಾರೈಸಿರುವ ಪ್ರಧಾನಿ ಮೋದಿ, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹದ ಬಣ್ಣಗಳು ಯಾವಾಗಲೂ ಸುರಿಯಲಿ. ನಿಮ್ಮೆಲ್ಲರಿಗೂ ಸಂತೋಷ ಮತ್ತು ವರ್ಣರಂಜಿತ ಹೋಳಿ ಶುಭಾಶಯಗಳು ಎಂದಿದ್ದಾರೆ.
ದ್ರೌಪದಿ ಮುರ್ಮು ಅವರು, ಹಬ್ಬವೂ ಉಲ್ಲಾಸ ಮತ್ತು ಉತ್ಸಾಹ.ನಮ್ಮ ವೈವಿಧ್ಯಮಯ ಸಮಾಜದ ರೋಮಾಂಚಕ ಬಣ್ಣಗಳು ಮತ್ತು ಸಾಮರಸ್ಯವನ್ನು ಸಂಕೇತಿಸುತ್ತದೆ ಎಂದು ಹೇಳಿದರು.
ಈ ಮಹಾನ್ ಬಣ್ಣದ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಹೊಸ ಶಕ್ತಿಯನ್ನು ತರಲಿ ಎಂದು ನಾನು ಬಯಸುತ್ತೇನೆ ಎಂದು ಹಾರೈಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದು, ಹೋಳಿ ಹಬ್ಬವು ದೇಶವನ್ನು ಏಕತೆಯಿಂದ ಬಣ್ಣಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂತೋಷದ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ಶುಭ ಹಾರೈಸಿದ್ದಾರೆ. “ಈ ಸಂತೋಷದ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬಲಿ ಎಂದು ನುಡಿದಿದ್ದಾರೆ.