ಹೋಳಿ ಹಬ್ಬದ ಹಿನ್ನಲೆ ಶಾಂತಿ ಸಭೆ

ರಾಯಚೂರು. ಮಾ.೨೭.ಕಳೆದ ೧೫ ದಿನಗಳಿಂದ ರಾಜ್ಯದಲ್ಲಿ ಕೊರೊನ ಎರಡನೇ ಅಲೆ ಪ್ರಾರಂಭವಾಗಿದ್ದು ಸತತವಾಗಿ ಪ್ರಕರಣಗಳು ಏರಿಕೆಯಾಗುತ್ತಿವೆ ಅದರಿಂದ ಮುಂಬರುವ ಹೋಳಿ ಹಬ್ಬ,ಷಬ್-ಎ-ಬರಾತ್ ನಡೆಯಬಹುದಾದ ಹಬ್ಬಗಳಲ್ಲಿ ಗುಂಪು ಸೇರಬರದು ಎಂದು ಪೊಲೀಸ್ ಅಧೀಕ್ಷಕರಾದ ಶಿವನಗೌಡ ಪಾಟೀಲ್ ಅವರು ಹೇಳಿದರು.
ನಿನ್ನೆ ನಗರದ ಸದರ್ ಬಜಾರ ಪೋಲಿಸ್ ಠಾಣೆಯಲ್ಲಿ ನಡೆದ ವಿವಿಧ ಹಬ್ಬಗಳ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ೧೯ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಗಮನಿಸಿ ಮುಂಬರುವ ಹೋಳಿಹಬ್ಬ,ಯುಗಾದಿ,ಷಬ್-ಎ-ಬರಾತ್,ಗುಡ್ ಪ್ರೈಡೆ ಇತ್ಯಾದಿ ಹಬ್ಬಗಳ ಸಂದರ್ಭದಲ್ಲಿ ನಡೆಯಬಹುದಾದ ಸಮಾರಂಭಗಳನ್ನು,ಆಚರಣೆಗಳು ಹಾಗೂ ಸಾರ್ವಜನಿಕರು ಗುಂಪು ಸೇರಬಹುದಾದ ಇತರ ಚಟುವಟಿಕೆಗಳು ನಡಿಸಿದರೆ ಸೋಂಕು ಹರಡುವಿಕೆ ಹೆಚ್ಚಾಗುತ್ತದೆ,
ಮಾ.೨೯ರಂದು ನಡೆಯಲಿರುವ ಹೋಳಿ ಹಬ್ಬವನ್ನು ಕೋವಿಡ್ ಹಿನ್ನಲೆಯಲ್ಲಿ ಹಬ್ಬಗಳನ್ನು ಆಚರಿಸದಿರಲು ನಿರ್ದರಿಸಲಾಗಿದೆ ಅದರಿಂದ ಸಾರ್ವಜನಿಕರು ಮನೆಯಲ್ಲಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಐ.ಮಲ್ಲಮ ಚೌಬೇರಿ,ಸಿಪಿಐ ನ್ಯಾಮಗೌಡ,ಪಿಎಸ್‌ಐ ಮಂಜುನಾಥ, ಬಸವರಾಜ,ನರಸಮ್ಮ,ಸಿಬ್ಬಂದಿಗಳದ ಚಂದ್ರಕಾಂತ್, ಬಸವರಾಜ,ಖಾದರ್, ಚಂದುಪಾಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.