ಹೋಳಿ ಹಬ್ಬದ ಶಾಂತಿ ಸಭೆ

ಇಂಡಿ:ಮಾ.26: ನಗರದ ಪೊಲೀಸ ಉಪವಭಾಗದ ಕಾರ್ಯಾಲಯದ ಸಭಾ ಭವನದಲ್ಲಿ ಆಯೋಜಿಸಿದ ಡಿ,ವೈ,ಎಸ್,ಪಿ, ಶ್ರೀಧರ ದೋಡ್ಡಿ ಅವರ ನೇತ್ರತ್ವದಲ್ಲಿ. ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಯಾವ ರೀತಿ ಹಬ್ಬ ಮಾಡಬೇಕು ಹೇಗೆ ಆಚರಣೆಮಾಡಬೇಕು ಅನ್ನುವ ವಿಚಾರವನ್ನು ತಿಳಿದಕೋಳ್ಳಲು. ಇಲ್ಲಿ ತಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು, ಸಲಹೆ ಸೂಚನೆಗಳ, ವಿನಿಮಯ ಮಾಡಿಕೋಳ್ಳಲು ಈ ಸಭೆಯನ್ನು ಕರೆಯಲಾಗಿದೆ. ಸರಕಾರದ ನಿರ್ದೇಶನದಂತೆ ಕೋವಿಡ-19 2ನೇ ಅಲೆಯು ತುಂಬಾ ಅಪಯಕಾರಿ ಮಟ್ಟದಲ್ಲಿ ಹರಡುತ್ತಿರವುದರಿಂದ ಚಾಚುತಪ್ಪದೆ ಸರಕಾರದ ನಿಯಮಗಳು ಪಾಲಿಸುವುದರ ಜೊತೆಗೆ ತುಂಬಾ ಜಾಗ್ರತೆಯಿಂದ ಇರಬೇಕು. ಕಡ್ಡಾಯವಾಗಿ ಮಾಸ್ಕಧರಿಸಬೇಕು, ಸನಿಟೈಜರ ಉಪಯೋಗಿಸಬೇಕು, ಸಾಮಾಜಿ ಅಂತರ ಕಾಯ್ದುಕೋಳ್ಳಬೇಕು. ಹಾಗೂ ತಮ್ಮೆಲ್ಲರ ಸಹಾಯ ಸಹಕಾರ ನಮಗೆ ಅತ್ಯವಶ್ಯಕತೆ ಇದೆ ಎಂದು ಅವರು ಹೇಳಿದರು. ಇದೆ ಸಂರ್ಭದಲ್ಲಿ ಮಾತನಾಡಿದ ಸಿ,ಪಿ,ಆಯ್, ರಾಜಶೇಖರ ಬಡದೇಸಾರ ಅವರು ಹೋಳಿ ಹಬ್ಬ ಆಚರಣೆಮಾಡಲು ಅವಕಾಶ ಕೊಟ್ಟಿದೆ ಎಂದು ತಿಳಿದು ಇದೆ ಕೊನೆಯ ನಿರ್ಣಯ ಎಂದು ತಿಳಿಯಬಾರದು ಹಬ್ಬದಹಿಂದಿನ ದಿನ ಸರಕಾರ ಎನು ಆದೇಶ ಹೋರಡುಸುತ್ತಿದೆಯೋ ಅದಕ್ಕೆ ತಾವೆಲ್ಲರೂ ಬದ್ದರಾಗಬೇಕು ಎಂದು ಹೇಳಿದರು.

ನಗರದ ಮುಖಂಡರಾದ ಕಾಸುಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಇಲಿಯಾಸ ಬೋರಾಮಣಿ, ಜಗದೇಶ ಕ್ಷತ್ರಿ, ಪ್ರಶಾಂತ ಕಾಳೆ, ಹುಚ್ಚಪ್ಪ ತಳವಾರ, ಪ್ರಕಾಶ ಬಿರಾದಾರ, ಹೋಳಿ ಹಬ್ಬದ ಕುರಿತು ತಮ್ಮ ಅನಿಸಿಕೆಗಳನ್ನು ವೆಕ್ತಪಡಿಸಿದರು. ಶಹರ ಪೊಲೀಸ ಠಾಣೆ ಪಿ,ಎಸ್,ಆಯ್, ಮಾಳಪ್ಪ ಪೂಜಾರಿ, ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ ಅರಬ, ಸದಸ್ಯರಾದ ಅಯುಬ ಬಾಗವಾನ, ದೆವೇಂದ್ರ ಕುಂಬಾರ, ಜಾಂಗಿರ ಸೌದಾಗರ, ಲಿಂಬಾಜಿ ರಾಠೋಡ, ಸತಿಶ ಕುಂಬಾರ, ಉಮೇಶ ದೇಗಿನಾಳ,ಖಾಜಿ ಹಾಗೂ ಅವಿನಾಶ ಬಗಲಿ, ಶಿವಾನಂದ ಮುರಮನ, ಸಂತೋಷ ಪರಸೆನವರ, ಮಹೇಶ ಹೋನ್ನಬಿಂದಗಿ, ಶ್ರೀಸೈಲ ಅರ್ಜುನಗಿ ಸೆರಿದಂತೆ ಅನೆಕ ಜನರು ಪಾಲ್ಗೋಂಡಿದರು.