ಹೋಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ವಿಶೇಷ ರೈಲು

ರಾಯಚೂರು,ಮಾ.೦೩- ಹಲವಾರು ಕ್ಷೇತ್ರಗಳಲ್ಲಿ ವಿಶೇಷವಾಗಿ ಕೂಲಿ ಕಾರ್ಮಿಕರು, ಐಟಿಬಿಟಿ ಕ್ಷೇತ್ರದಲ್ಲಿ ಬೆಂಗಳೂರಿಗೆ ದುಡಿಯಲು ಹೋಗಿರುವ ಸಾರ್ವಜನಿಕರಿಗೆ ಹೋಳಿ ಹಬ್ಬ ಆಚರಿಸಲು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಬೆಂಗಳೂರಿನಿಂದ ಕಾಚಿಗೂಡದವರಿಗೆ ವಿಶೇಷ ರೈಲು ಬಿಡಲಾಗಿದೆ ಎಂದು ಸಂಸದರಾದ ರಾಜಾ ಅಮರೇಶ್ವರ ನಾಯಕ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ರೈಲು ಸಂಖ್ಯೆ ೦೬೫೨೩ ನ್ನು ದಿನಾಂಕ ೫.೩.೨೦೨೩ ರಂದು ಬಿಡಲಾಗುವುದು. ಸದರಿ ರೈಲ್ ಬೆಂಗಳೂರಿನಿಂದ ಬಿಡುವ ವೇಳೆ ಮಧ್ಯಾಹ್ನ ೩:೩೦ಕ್ಕೆ ಬಿಟ್ಟು ರಾತ್ರಿ ೧೦:೩೦ ಕ್ಕೆ ಮಂತ್ರಾಲಯ ೧೧.೦೦೦ ಗಂಟೆಗೆ ರಾಯಚೂರು ತಲುಪಲಿದ್ದು ಗದ್ವಾಲ್ ಮೂಲಕ ಮಾರನೆಯ ದಿನ ಬೆಳಗ್ಗೆ ೫:೨೦ಕ್ಕೆ ಕಾಚಿಗುಡ ತಲುಪುತ್ತದೆ. ಇದರ ಸಂಪೂರ್ಣ ರೂಟ್ ಮ್ಯಾಪ್ ಸಿಗುತ್ತದೆ.
ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮತ್ತು ಈ ವಿಶೇಷ ರೈಲು ಬಿಟ್ಟಿರುವ ಕಾರಣ ರೈಲ್ವೆ ಇಲಾಖೆಗೆ ಹಾಗೂ ಸಂಸದರು ರಾಯಚೂರು ಇವರಿಗೆ ರೈಲ್ವೆ ಬೋರ್ಡ್ ಸದಸ್ಯರು ಸೌತ್ ಸೆಂಟ್ರಲ್ ರೈಲ್ವೆ ಸದಸ್ಯರಾದ ಬಾಬುರಾವ್ ಧನ್ಯವಾದಗಳನ್ನ ತಿಳಿಸಿದರು.