ಹೋಳಿ ಹಬ್ಬದ ನಿಮಿತ್ತ ಶಾಂತಿ ಸಭೆ


ಶಿರಹಟ್ಟಿ,ಮಾ.4: ಶಿರಹಟ್ಟಿ ಪಟ್ಟಣವು ಭಾವೈಕ್ಯತೆಯ ನಾಡಾಗಿದ್ದು, ಶ್ರೀ ಜಗದ್ಗುರು ಫಕ್ಕಿರೇಶ್ವರರು ಹೇಳಿರುವ ಹಾಗೆ ದ್ವೇಷ ಬಿಟ್ಟು ಪ್ರೀತಿ ಮಾಡು ಎಂಬಂತೆ ಎಲ್ಲ ಹಬ್ಬ ಹರಿದಿನಗಳನ್ನು ಸಂಪ್ರದಾಯದಂತೆ ಆಚರಿಸಿ ಸಂಭ್ರಮಿಸಬೇಕು ಆಚರಣೆಯಲ್ಲ ಸೌಹಾರ್ಧತೆಯನ್ನು ಬೆರೆಸಿದರೆ ಎಲ್ಲರಲ್ಲಿ ಅನ್ಯೋನ್ಯತೆ ಉಂಟಾಗಿ ಹಬ್ಬಕ್ಕೆ ಹೊಸ ಕಳೆ ಬರುತ್ತದೆ ಎಂದು ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಹೇಳಿದರು.
ಅವರು ಪಟ್ಟಣದ ಪೋಲೀಸ್ ಠಾಣೆಯಲ್ಲಿ ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶಿರಹಟ್ಟಿ ಪಟ್ಟಣದಲ್ಲಿ ಈ ಹಿಂದಿನಂತೆ ಸಂಪ್ರದಾಯ ಪ್ರಕಾರ ವಾಲ್ಮೀಕಿ ವೃತ್ತದಿಂದ ಹುಲಗಾಮನ ಮೆರವಣಿಗೆ ಆರಂಭವಾಗಿ ಕಪ್ಪತ್ತನವರ ವೃತ್ತದಿಂದ ಕೆಳಗೇರಿ ಓಣಿ ಮತ್ತುಶೆಟ್ಟರ ಓಣಿಯಿಂದ ಗಾಂಧೀ ವೃತ್ತ ಮಾಬುಸುಭಾನಿ ದರ್ಗಾ ಮರಾಠಗಲ್ಲಿ, ಮ್ಯಾಗೇರಿ ಕುರುಬರ ಓಣಿಯಿಂದ ವಾಲ್ಮೀಕಿ ವೃತ್ತಕ್ಕೆ ಮೆರವಣಿಗೆ ಸಾಗಿ ಬರಲಿದ್ದು, ಅದೇರೀತಿಯಲ್ಲಿ ಓಕಳಿ ಬಂಡಿಯು ಸಹಿತ ಇದೇ ಮಾರ್ಗದಲ್ಲಿ ಸಾಗಲಿದೆ. ಎಲ್ಲ ಆಚರಣೆಗಳು ದಿ 7 ಮಂಗಳವಾರ ಮತ್ತು 8 ಬುದವಾರ ರಂದು ಆಚರಣೆ ಯಾಗಲಿವೆ ಈ ಸಂದರ್ಭದಲ್ಲಿ ಯಾವದೆ ಕೋಮಿನ ವ್ಯಕ್ತಿ ಕಾನೂನು ಕೈಗೆತ್ತಿಗೊಂಡು ಅಹಿತಕರ ಘಟನೆ ಜರುಗಿಸಿದರೆ ಪೋಲೀಸ್ ಇಲಾಖೇ ಕಠಿಣ ಕ್ರಮ ಜರುಗಿಸುತ್ತದೆ. ಊರಿನ ಗಣ್ಯರು ಮತ್ತು ಯುವಕರು ಅಹಿತಕರ ಘಟನೆಗೆಕಾರಣವಾಗದಂತೆ ಎಚ್ಚರಿಕೆಯನ್ನು ವಹಿಸಿಬೇಕೆಂದು ಹೇಳಿದರು.
ಈ ಸಂಬರ್ಧದಲ್ಲಿ ಪಿಎಸ್‍ಐ ಈರಣ್ಣ ರಿತ್ತಿ, ಯಲ್ಲಪ್ಪಗೌಡ ಪಾಟೀಲ್, ಚಾಂದಸಾಬ ಮುಳಗುಂದ, ಪರಮೇಶ ಪರಬ, ಯಲ್ಲಪ್ಪ ಇಂಗಳಗಿ, ಮುಸ್ತಾಕ ಚೋರಗಸ್ತಿ, ರಾಜು ಶಿರಹಟ್ಟಿ, ಅಲ್ಲಾಭಕ್ಷಿ ನಗಾರಿ, ಪರಶುರಾಮ ಡೊಂಕಬಳ್ಳಿ, ಮುಂತಾದವರು ಉಪಸ್ಥಿತರಿದ್ದರು.