ಹೋಳಿ ಹಬ್ಬಕ್ಕೆ ಕಮಲಾ ಶುಭಾಶಯ

ವಾಷಿಂಗ್ಟನ್, ಮಾ.೨೯- ಹೋಳಿ ಹಬ್ಬಕ್ಕೆ ಭಾರತೀಯರು ಸೇರಿದಂತೆ ಎಲ್ಲರಿಗೂ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಶುಭಾಶಯ ಕೋರಿದ್ದಾರೆ.
ಹೋಳಿ ಹಬ್ಬ ಸಕಾರಾತ್ಮಕತೆ ಯನ್ನು ತುಂಬಲಿ. ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಹ್ಯಾಪಿ ಹೋಳಿ. ಹೋಳಿ ಹಬ್ಬದ ಈ ಸಂದರ್ಭದಲ್ಲಿ ಸ್ನೇಹಿತರು ಹಾಗೂ ಪ್ರೀತಿಪಾತ್ರರಾದವರೆಗೆ ಬಣ್ಣಗಳನ್ನು ಹಂಚುವುದಕ್ಕೆ ಹಬ್ಬ ಹೆಸರುವಾಸಿಯಾಗಿದೆ. ಹೋಳಿ ಹಬ್ಬ ಸಂತೋಷದ ಹಬ್ಬವಾಗಿದ್ದು ಸಕಾರಾತ್ಮಕ ತೆ ತರಲಿ ಎಂದು ಹಾರೈಸಿದ್ದಾರೆ.
ಕಠಿಣ ಸಂದರ್ಭದಲ್ಲಿ ವಿಶ್ವದ ಎಲ್ಲ ಜನರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಹೇಳಿದ್ದಾರೆ.
ಮಾರ್ಚ್ ೨೮ ಮತ್ತು ೨೯ರಂದು ಹೋಳಿ ಹಬ್ಬವನ್ನು ಭಾರತೀಯರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರು ಕೂಡ ಭಾರತೀಯ ಮೂಲದವರಾಗಿರುವ ಹಿನ್ನೆಲೆಯಲ್ಲಿ ಹೋಳಿಕ್ಕೆ ಹಬ್ಬದ ಶುಭಾಶಯ ಕೋರಿದ್ದಾರೆ.
೫೬ ವರ್ಷದ ಕಮಲಾ ಹ್ಯಾರೀಸ್ ಅವರು ಅಮೆರಿಕದ ೪೯ನೇ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ದಕ್ಷಿಣ ಏಷ್ಯಾದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ