ಹೋಳಿ: ಶಾಂತಿ ಪಾಲನಾ ಸಭೆ

ಮುನವಳ್ಳಿ,ಮಾ7: ಪಟ್ಟಣದ ಪೊಲೀಸ ಠಾಣೆಯಲ್ಲಿ ಶಾಂತಿ ಪಾಲನಾ ಸಭೆ ಸೋಮವಾರ ಜರುಗಿತು.
ಸಿ.ಪಿ.ಐ ಜೆ. ಕರುನೇಶಗೌಡ ಮಾತನಾಡಿ ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ಶಾಂತಿ ಸುವ್ಯವಸ್ಥೆ ಕಾಯ್ದುಕೊಂಡು ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕು ಜೊತೆಗೆ ಕಾನೂನನ್ನು ಪಾಲಿಸಬೇಕು ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣದ ಜನತೆ ನೋಡಿಕೊಳ್ಳಬೇಕು ಎಂದರು.
ಕಾಂಗ್ರೆಸ ಮುಖಂಡ ಪಂಚನಗೌಡ ದ್ಯಾಮನಗೌಡರ, ಡಾ|| ಬಸಿರಹಮ್ಮದ ಬೈರಕದಾರ, ಡಿ.ಡಿ.ಟೋಪೋಜಿ, ಟಿ.ಎನ್.ಮುರಂಕರ, ಬನ್ನದ ಹೋಕೂಳಿಯನ್ನು ಪ್ರತಿವರ್ಷವು ನಡೆಯುವಂತೆ ಶಾಂತಿಯುತವಾಗಿ ನಡೆಯಲು ಸಹಕಾರ ನೀಡುತ್ತೆವೆ ಹಾಗೂ ಮೊದಲಿನಿಂದಲೂ ಮುನವಳ್ಳಿಯ ಜನತೆ ಶಾಂತಿ ಪ್ರಿಯರು ಹೋಳಿಹಬ್ಬವನ್ನು ಎಲ್ಲರು ಸೇರಿ ಶಾಂತಿಯುತವಾಗಿ ಆಚರಿಸುತ್ತೇವೆ ಎಂದು ಹೇಳಿದರು.
ಮೀರಾಸಾಬ ವಟ್ನಾಳ, ಚಂದ್ರು ಜಂಬ್ರಿ, ವಿಜಯ ಅಮಠೆ, ಶೇಖರ ಗೊಕಾಂವಿ, ಗರಿಭಸಾಬ ಮಕಂದಾರ, ಗಜಾನನ ಕಲಾಲ, ಅಕ್ಬರ ಜಮಾದಾರ, ರಾಜು ಕಿಲ್ಲೆದಾರ ಪುರಸಭೆ ಸದಸ್ಯ ಶ್ರೀಕಾಂತ ಮಲಗೌಡ್ರ, ಗುರುಶಾಂತ ಚಂದರಗಿ, ಸುಭಾಸ ಗೀದಿಗೌಡ್ರ, ಪ್ರಕಾಶ ನಲವಡೆ, ಈಶ್ವರ ಕರಿಕಟ್ಟಿ, ಶ್ರೀಶೈಲ ನೆಗಿನಾಳ, ಹುಸೆನಸಾಬ ಪಠಾಣ, ಹುಕ್ಕೇರಿ, ಚೋಪದಾರ, ಗಡಾದ, ಬೆಳವಡಿ, ಸ್ಥಳಿಯ ಠಾಣೆಯ ಪಿ.ಎಸ್.ಐ ಗೋಳಸಂಗಿ, ಎ.ಎಸ್.ಐ ಫರಿಠ, ಪೂಲಿಸ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಸಿಬ್ಬಂದಿವರ್ಗ, ಯುವಕರು, ಹಾಗೂ ಸಾರ್ವ ಜನಿಕರು ಉಪಸ್ಥಿತರಿದ್ದರು.