ಹೋಳಿ ಆಚರಣೆ ಶಾಂತಿಗೆ ಭಂಗ ತರದಿರಲಿ:ಪಿ.ಎಸ್.ಐ ಮಂಟೂರ

ತಾಳಿಕೋಟೆ:ಮಾ.4: ಹೋಳಿ ಹುಣ್ಣಿಮೆಯು ಸಂಬ್ರಮಕ್ಕೆ ಕಾರಣವಾಗಬೇಕೆ ವಿನಃ ಅಶಾಂತಿ ನಿರ್ಮಾಣಕ್ಕೆ ಕಾರಣವಾಗಬಾರದು ಈ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದಂತೆ ಹೋಳಿ ಹುಣ್ಣಿಮೆಯ ಆಚರಣೆ ಯಾಗಬೇಕೆಂದು ತಾಳಿಕೋಟೆ ಪೊಲೀಸ್ ಠಾಣಾ ಪಿ.ಎಸ್.ಆಯ್. ಸುರೇಶ ಮಂಟೂರ ಅವರು ಹೇಳಿದರು.

ಶುಕ್ರವಾರರಂದು ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಇದೇ ದಿ. 7,8,9 ಈ ಮೂರು ದಿನಗಳ ಆಚರಿಸಲಾಗುತ್ತಿರುವ ಹೋಳಿ ಹುಣ್ಣಿಮೆಯ ನಿಮಿತ್ಯ ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಶಾಂತತೆಗೆ ಹೆಸರುವಾಸಿಯಾಗಿರುವ ತಾಳಿಕೋಟೆ ಪಟ್ಟಣದಲ್ಲಿ ಸಾಂಪ್ರದಾಯಕ ಬಣ್ಣದಾಚರಣೆ, ಕಾಮದಹನ, ಇದ್ದೇ ಇರುತ್ತದೆ ಕಾಮದಹನವು ಅತೀಯಾದ ರಾತ್ರಿಹೊತ್ತು ಮಾಡಬಾರದು ಆದಷ್ಟು ರಾತ್ರಿ 11 ಗಂಟೆಯೊಳಗೆ ಮುಗಿಸಬೇಕು ಎರಡು ದಿನಗಳ ಬಣ್ಣದ ಆಚರಣೆ ಇರುತ್ತದೆ ಬಣ್ಣವು ಕೆಮಿಕಲ್ ರಹಿತವಾಗಿರಲಿ ಬಣ್ಣದಿಂದ ಚರ್ಮಕ್ಕೆ ತೊಂದರೆಯಾಗಬಾರದು ವಾರ್ನೇಸ, ಏರಿ ಏಣ್ಣಿ, ಮತ್ತು ತಲೆಯ ಮೇಲೆ ತತ್ತಿ ಒಡೆಯುವದು ಇಂತಹವುಗಳನ್ನು ಮಾಡಬಾರದು ಒಳ್ಳೆಯ ಬಣ್ಣದೋಕುಳಿ ಇರಲಿ ಯಾರಿಗೂ ಕೂಡಾ ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚ ಬಾರದು ಬಣ್ಣದಲ್ಲಿ ಪಾಲ್ಗೊಂಡು ಯಾರು ಸಂಭ್ರಮ ಪಡಲು ಇಚ್ಚಿಸುತ್ತಾರೋ ಅಂತವರ ಜೊತೆಗೆ ಬಣ್ಣದಾಟವಿರಲಿ ಕೆಲವು ಜನರು ಬಣ್ಣ ಆಡದಿದ್ದರೂ ಬಣ್ಣ ಆಡುವದನ್ನು ನೋಡಿ ಖುಷಿ ಪಡುತ್ತಿರುತ್ತಾರೆ ಅಂತವರಿಗೂ ನೋಡಲು ಅವಕಾಶ ಕೊಡಿ ಒಟ್ಟಾರೆ ಬಣ್ಣದ ಹಬ್ಬ ಹೋಳಿ ಹುಣ್ಣಿಮೆ ಸಂಭ್ರಮದಿಂದ ಕೂಡಿದ್ದರೂ ಶಾಂತಿಯುತವಾಗಿ ಕೂಡಿರಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ ಎಂದ ಅವರು ಕಾಮದಹನದ ಸಮಯದಲ್ಲಿ ಮೇಲುಗಡೆ ವಿದ್ಯುತ್ ಸರ್ವಿಸ್ ವಾಯರಗಳು ಇರುತ್ತವೆ ಅಂತವುಗಳು ನೋಡಿ ದಹನ ಮಾಡಬೇಕು ಮತ್ತು ಬಣ್ಣದ ಹಬ್ಬದಲ್ಲಿ ಆರೋಗ್ಯಕ್ಕೆ ಹಾನಿಕರವಾಗಿರುವ ಕೆಮಿಕಲ್ ಬಣ್ಣ ಬಳಿಸಬೇಡಿ ಉತ್ತಮ ಬಣ್ಣ ಬಳಿಸಿ ಸಂಬ್ರಮದ ಹೋಳಿ ಆಚರಣೆ ಯಾಗಲಿ ಎಂದರು.

ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಇಬ್ರಾಹಿಂ ಮನ್ಸೂರ, ಹಾಗೂ ಜೈಸಿಂಗ್ ಮೂಲಿಮನಿ, ಶಮಶುದ್ದೀನ ನಾಲಬಂದ ಅವರು ಮಾತನಾಡಿ ತಾಳಿಕೋಟೆ ಪಟ್ಟಣವು ಶಾಂತತೆಗೆ ಹೆಸರುವಾಸಿಯಾದ ಪಟ್ಟಣವಾಗಿದೆ ಈ ಹಿಂದೆ ಯಾವುದೋ ಒಂದು ಘಟನೆಯಿಂದ ಕಪ್ಪು ಚುಕ್ಕಿ ಹೊಂದಿದ್ದರೂ ಕೂಡಾ ಸದ್ಯ ಹಿಂದೂ-ಮುಸ್ಲಿಂ ಬೇದಬಾವವಿಲ್ಲದೇ ಸಹೋದರತೆಯಿಂದ ಸಹಬಾಳ್ವೆಯಿಂದ ಜೀವನ ನಡೆಸುವಂತಹ ಪಟ್ಟಣವಾಗಿದೆ ಯಾವುದೇ ಹಬ್ಬಗಳಿದ್ದರೂ ಕೂಡಾ ಎಲ್ಲ ಜನರು ಕೂಡಿಕೊಂಡು ಸಂಭ್ರಮದಿಂದ ಆಚರಿಸುತ್ತೇವೆ ಹೋಳಿ ಆಚರಣೆ ಸಂಬ್ರಮದಿಂದ ಕೂಡಿದ್ದರೂ ಕೂಡಾ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಹಿರಿಯರೂ ಕೂಡಾ ಜವಾಬ್ದಾರಿಯಾಗಿ ಕೆಲಸ ನಿರ್ವಹಿಸುತ್ತೇವೆಂದರು.

ಪುರಸಭಾ ನಾಮನಿರ್ದೇಶಿತ ಸದಸ್ಯ ರಾಘವೇಂದ್ರ ವಿಜಾಪೂರ ಅವರು ಮಾತನಾಡಿ ನಮ್ಮ ಸನಾತನ ಸಂಸ್ಕøತಿ ಉಳುವಿಗಾಗಿ ಮತ್ತು ಬೆಳವಣಿಗೆಗಾಗಿ ಹೋಳಿ ಹುಣ್ಣಿಮೆಯ ನಿಮಿತ್ಯ ಇದೇ ದಿ.5 ರಂದು ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಶ್ರೀ ಅಂಬಾಭವಾನಿ ಮಂದಿರದ ಮುಂಭಾಗದ ಆವರಣದಲ್ಲಿ ಹಲಗೆ ಮೇಳ ಆಯೋಜನೆ ಮಾಡಲು ನಿರ್ದರಿಸಲಾಗಿದೆ ಮೇಳದ ನಂತರ ಪಟ್ಟಣದಲ್ಲಿ ಹಲಗೆ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ಸಭೆಗೆ ಮಾಹಿತಿ ಒದಗಿಸಿದರು.

ಈ ಸಮಯದಲ್ಲಿ ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಪುರಸಭಾ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಪರಶುರಾಮ ತಂಗಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನಿಂಗು ಕುಂಟೋಜಿ, ಡಿ.ವ್ಹಿ.ಪಾಟೀಲ, ಮುಖಂಡರುಗಳಾದ ಪ್ರಕಾಶ ಹಜೇರಿ, ರಾಘವೇಂದ್ರ ಮಾನೆ, ವಿಠ್ಠಲ ಮೋಹಿತೆ, ಮಲ್ಲು ಕಸಬೇಗೌಡರ, ಶರಣಗೌಡ ಗೊಟಗುಣಕಿ, ಮೋದಿನಸಾ ನಗಾರ್ಚಿ, ಮಹೇಶ ಚಲವಾದಿ, ಈಶ್ವರ ಹೂಗಾರ, ನಿಸಾರ ಬೇಪಾರಿ, ನಾಗರಾಜ ಪತ್ತಾರ, ಸಿದ್ದು ಶಿರಶಿ, ಬಸ್ಸು ಜಾಧವ, ಶಾಂತಪ್ಪ ಹಡಪದ, ಶೌಕತ್ ಲಾಹೋರಿ, ಮೈಹಿಬೂಬ ಚೋರಗಸ್ತಿ, ಫಯಾಜ್ ಉತ್ನಾಳ, ಗೌಸ ನಾಸರ, ಮೊದಲಾದವರು ಉಪಸ್ಥಿತರಿದ್ದರು.