ಹೋಳಿಹುಣ್ಣಿಮೆ-ರಂಜಾನ್ ಹಬ್ಬದ ಶಾಂತಿ ಸಭೆ


ನವಲಗುಂದ,ಮಾ.18: ರಾಮಲಿಂಗ ಕಾಮಣ್ಣನ ದರ್ಶನಕ್ಕೆ ರಾಜ್ಯ ಹೊರ ರಾಜ್ಯದಿಂದ ಭಕ್ತರು ಬರುತ್ತಾರೆ ಅವರು ನಮ್ಮ ಅತಿಥಿಗಳ ಇದ್ದ ಹಾಗೆ ಸರದಿ ಸಾಲಿನಲ್ಲಿ ನಿಂತವರಿಗೆ ಅಕ್ಕಪಕ್ಕದ ಮನೆಯವರು ಮನೆಯ ಮುಂದೆ ಒಂದು ಬಿಂದಿಗೆ ಕುಡಿಯುವ ನೀರಿಟ್ಟು ಸಹಕರಿಸಿ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಅವರು ಪಟ್ಟಣದ ಜನಸ್ನೇಹಿ ಪೆÇಲೀಸ್ ಠಾಣೆಯಲ್ಲಿ ರಂಜಾನ್ ಹಾಗೂ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣೆಯ ನೀತಿ ಸಹಿತ ಹಿನ್ನಲೆ ಕಡ್ಡಾಯವಾಗಿ ಮೈಕ್ ಮತ್ತು ಬ್ಯಾನರ್ ಪರವಾನಿಗೆಯನ್ನು ಪಡೆದುಕೊಳ್ಳಿ ಅನುಮತಿ ಪಡೆಯದೆ ಇದ್ದಲ್ಲಿ ಸುಕಾ ಸುಮ್ಮನೆ ಕಾನೂನು ಕಣ್ಣಿಗೆ ಗುರಿಯಾಗುತ್ತೀರಿ. ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದಕೊಳ್ಳಲೇಬೇಕು ತಮಗೆ ಬೇಕಾಗಿರುವ ಸೌಲತ್ತುಗಳನ್ನು ನೀಡಲು 24 ಗಂಟೆ ಕೆಲಸ ಮಾಡಲು ಸಿದ್ದರಿದ್ದೇವೆ ಎಲ್ಲವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮಾಡೋಣ.
ಗ್ರಾಮದ ಹಿರಿಯರು ಸಮಸ್ಯೆಗಳು ಬರದ ಹಾಗೇ ನೋಡಿಕೊಳ್ಳಿ ಯುವಕರು ಆವೇಶದಲ್ಲಿ ಏನಾದರೂ ತಪ್ಪುಗಳನ್ನು ಮಾಡಿದರೆ ಅದು ಅವರ ಜೀವನವನ್ನೇ ಹಾಳು ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕದೆ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಸ್ನೇಹ ಬಾಂಧವ್ಯದಿಂದ ಹಬ್ಬ ಆಚರಿಸಿ ಎಂದರು.
ಸಿಪಿಐ ರವಿಕುಮಾರ ಕಪ್ಪತನವರ ಮಾತನಾಡಿ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಯಾವ ಮಾರ್ಗಗಳಲ್ಲಿ ವಾಹನ ಪಾರ್ಕಿಂಗ್ ಮತ್ತು ಲೈಟ್ ನೀರಿನ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸಾ ವಿಭಾಗ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿ ಹಾಗೂ ಎಚ್ಚರಿಕೆಯಿಂದ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.
ಮುಖಂಡರಾದ ಉಸ್ವಾನ ಬಬರ್ಚಿ, ರಾಯನಗೌಡ ಪಾಟೀಲ್, ಅಬ್ಬಾಸ ದೇವರಿಡು ಮಾತನಾಡಿ ಹಿಂದೂ ಮತ್ತು ಮುಸ್ಲಿಂ ಗಳ ಯಾವುದೇ ಹಬ್ಬವಾದರೂ ಭಾವೈಕ್ಯತೆಯಿಂದ ಒಟ್ಟಿಗೆ ಆಚರಣೆ ಮಾಡುತ್ತಲೇ ಬಂದಿದ್ದೇವೆ ಇಲ್ಲಿ ಪರಸ್ಪರ ಸಹೋದರರ ಹಾಗೆ ನಮ್ಮ ಜೀವನಗಳನ್ನು ನಡೆಸುತ್ತಿದ್ದೇವೆ ಪಟ್ಟಣದಲ್ಲಿ ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಿದ್ದೇವೆ ನವಲಗುಂದದ ಹೆಸರಿಗೆ ಚುತಿ ಬರೆದ ಹಾಗೆ ಹಬ್ಬಗಳನ್ನು ಆಚರಣೆ ಮಾಡುತ್ತೇವೆ ಎಂದರು

ಈ ವೇಳೆ ಪಿಎಸ್‍ಐ ಜನಾರ್ಧನ್ ಭಟ್ರಹಳ್ಳಿ, ವೆಂಕಟೇಶ್ ನಾಗನೂರ ಪ್ರಮುಖರಾದ ಈರಣ್ಣ ಚವಡಿ, ಮಹಾಂತೇಶ ಬೋವಿ, ಹುಚ್ಚಪ್ಪ ಭೋವಿ, ಪ್ರಕಾಶ ಶಿಗ್ಲಿ ಶಂಕರಪ್ಪ ತೋಟದ?, ಮಹಾಂತೇಶ ಕಲಾಲ, ಮಂಜು ಜಾಲಗಾರ ಮತ್ತಿತರರು ಪಾಲ್ಗೊಂಡಿದ್ದರು.