ಹೋಳಿಹಬ್ಬ ಶಾಂತಿ ಸಭೆ

ರಾಮದುರ್ಗ, ಮಾ 27: ಹೋಳಿ ಹಬ್ಬದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಕೆ ಮಾಡದೇ ನೈಸರ್ಗಿಕವಾದ ಬಣ್ಣ ಬಳಕೆ ಮಾಡಿಕೊಂಡು ಆರೋಗ್ಯವಾಗಿರಬೇಕು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋಳಿ ಹಬ್ಬ ಆಚರಣೆ ಮಾಡಬೇಕೆಂದು ಪಿಎಸೈ ನಾಗನಗೌಡ ಕಟ್ಟಿಮನಿಗೌಡ್ರ ಹೇಳಿದರು.
ಶುಕ್ರವಾರ ಪೊಲೀಸ್‍ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬಗಳು ಸೌಹಾರ್ದತೆಯ ಸಂಕೇತವಾಗಿವೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರಲ್ಲದೆ ಶಾಂತಿಯುತ ಹಬ್ಬ ಆಚರಣೆ ಮಾಡುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಹಬ್ಬಗಳ ನೆಪದಲ್ಲಿ ಮದ್ಯಪಾನ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ ನದಿ ಸ್ನಾನಕ್ಕೆ ಹೋಗಬೇಡಿ ಪುರಸಭೆ ಪೊಲೀಸ್ ಇಲಾಖೆ ಸೂಚನೆಯಂತೆ ಜನರು ನದಿಗೆ ಇಳಿಯದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ರಾಘವೇಂದ್ರ ದೊಡಮನಿ, ಸದಸ್ಯ ಗುರುನಾಥ ರೇಣಕೆ, ಹೊಸಕೇರಿ ಗ್ರಾಪಂ ಅಧ್ಯಕ್ಷ ರಮೇಶ ಹೊಳೆಯನ್ನವರ, ಮುಖಂಡರಾದ ಮಹ್ಮದಶಫಿ ಬೆಣ್ಣಿ, ಗುರಪ್ಪ ಮೆನಸಗಿ ಸೇರಿದಂತೆ ಹಲವರಿದ್ದರು.