ಹೋಳಿಗೆ ಸಾರು

ಬೇಕಾಗುವ ಸಾಮಗ್ರಿಗಳು

*ಬೇಳೆ ಬೇಯಿಸಿದ ನೀರು – ೧/೨ ಲೋಟ
*ಹುಣಸೇಹಣ್ಣಿನ ರಸ – ೩ ಚಮಚ
*ಬೆಳ್ಳುಳ್ಳಿ – ೧
*ಈರುಳ್ಳಿ – ೧
*ಕೊತ್ತಂಬರಿ ಸೊಪ್ಪು – ೧ ಚಮಚ
*ತುಪ್ಪ – ೨ ಚಮಚ
*ಉಪ್ಪು -೧ ಚಮಚ
*ಕರಿಬೇವು – ೧೦ ಎಲೆ
*ಸಾಂಬಾರ್ ಪುಡಿ – ೩ ಚಮಚ
*ಒಣ ಮೆಣಸಿನಕಾಯಿ – ೩ ಚಮಚ
*ಅರಿಶಿಣ – ೧/೨ ಚಮಚ
*ಬೆಲ್ಲ – ೨ ಚಮಚ
*ಮೆಂತ್ಯ – ೨ ಚಮಚ
*ಜೀರಿಗೆ – ೧ ಚಮಚ
*ಸಾಸಿವೆ – ೧ ಚಮಚ

ಮಾಡುವ ವಿಧಾನ :

ಬಾಣಲಿಗೆ ತುಪ್ಪ ಹಾಕಿ. ಕಾದ ನಂತರ ಮೆಂತ್ಯ, ಜೀರಿಗೆ , ಕರಿಬೇವು, ಒಣಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಟೊಮೆಟೊ, ಕೊತ್ತಂಬರಿ ಸೊಪ್ಪು, ಸಾಂಬಾರ್ ಪುಡಿ, ಸ್ವಲ್ಪ ಬೇಳೆ ಬೇಯಿಸಿಕೊಂಡ ನೀರು ಹಾಕಿ ಕೈಯಾಡಿಸುತ್ತಾ ಬೇಯಿಸಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿ ಮಸಾಲಾ ರೆಡಿ ಮಾಡಿಕೊಳ್ಳಿ. ಬಾಣಲಿಗೆ ತುಪ್ಪ ಹಾಕಿ. ಬಿಸಿಯಾದ ಮೇಲೆ ಸಾಸಿವೆ, ಒಣ ಮೆಣಸಿನಕಾಯಿ, ಜೀರಿಗೆ, ಕರಿಬೇವು ಹಾಕಿ ಹುರಿಯಿರಿ. ಇದಕ್ಕೆ ಹುಣಸೇಹಣ್ಣಿನ ರಸ, ಅರಿಶಿಣ, ಉಪ್ಪು, ರುಬ್ಬಿಕೊಂಡ ಮಸಾಲಾ, ಬೇಳೆ ಬೇಯಿಸಿದ ನೀರು ಹಾಕಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿದರೆ ಹೋಳಿಗೆ ಸಾರು ರೆಡಿ.