ಹೋರಾಡಿ ಸೋತ ರಾಯಲ್ ಚಾಲೆಂಜರ್ಸ್

ಬೆಂಗಳೂರು: ಉತ್ತಮ ಬ್ಯಾಟಿಂಗ್ ಮಾಡಿದ ಹೊರತಾಗಿಯೂ ಆರ್ಸಿಬಿ ತಂಡ ಸನ್ ರೈಸರ್ಸ್ ವಿರುದ್ಧ 25 ರನ್ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಆರನೆ ಸೋಲು ಕಂಡಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು. ಆರ್ಸಿಬಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಕಲೆ ಹಾಕಿತು.
288 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಆರ್ಸಿಬಿಗೆ ವಿರಾಟ್ ಕೊಹ್ಲಿ (42ರನ್) ಮತ್ತು ನಾಯಕ ಫಾಫ್ ಡುಪ್ಲೆಸಿಸ್ ( 62ರನ್) ಮೊದಲ ವಿಕೆಟ್ಗೆ 80 ರನ್ ಸೇರಿಸಿದರು. ನಂತರ ಬಂದ ವಿಲ್ ಜಾಕ್ಸ್ (7ರನ್),ರಜತ್ ಪಾಟಿದಾರ್ (9ರನ್),ಸೌರವ್ ಚೌಹಾಣ್ (0ರನ್) ಬೇಗನೆ ಪೆವಿಲಿಯನ್ ಸೇರಿದರು. 122 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ದಿನೇಶ್ ಕಾರ್ತಿಕ್ ಮತ್ತು ಲೊಮ್ರೊರ್ 6ನೇ ವಿಕೆಟ್ಗೆ 59 ರನ್ ಜತೆಯಾಟ ನೀಡಿ ಚೇತರಿಕೆ ನೀಡಿದರು.ಲೊಮ್ರೊರ್ (19 ರನ್) ಕಮಿನ್ಸ್ ಎಸೆತದಲ್ಲಿ ಬೌಲ್ಡ್ ಆದರು. ದಿನೇಶ್ ಕಾರ್ತಿಕ್ 83 ರನ್ (35 ಎಸೆತ,5 ಬೌಂಡರಿ, 7 ಸಿಕ್ಸರ್) ಹೊಡೆದರು. ಕೊನೆಯಲ್ಲಿ ಅನೂಜ್ ರಾವತ್ ಅಜೇಯ 25, ವಿಜಯ್ ಕುಮಾರ್ ವೈಶಾಕ್ ಅಜೇಯ 1 ರನ್ ಗಳಿಸಿದರು.
ಸನ್ ರೈಸರ್ಸ್ ಪರ ಪ್ಯಾಟ್ ಕಮಿನ್ಸ್ 43ಕ್ಕೆ 3, ಮರ್ಕಂಡೆ 46ಕ್ಕೆ 2, ನಟರಾಜನ್ 47ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಸನ್ ರೈಸರ್ಸ್ ಪರ ಟ್ರಾವಿಸ್ 102, ಕ್ಲಾಸೆನ್ 67,ಮಾರ್ಕ್ ರಮ್ 32, ಅಬ್ದುಲ್ ಸಮಾದ್ 37 ರನ್ ಹೊಡೆದರು.
ಆರ್ಸಿಬಿ ಪರ ಫರ್ಗ್ಯೂಸ್ ನ್ 52ಕ್ಕೆ 2, ಟಾಪ್ಲೆ 68ಕ್ಕೆ 1 ವಿಕೆಟ್ ಪಡೆದರು.