ಹೋರಾಟದ ಹೆಸರಿನಲ್ಲಿ ಭೂಮಿ ಬಿಕ್ಷೆ ಕೇಳುವುದು ಅವಮಾನ

ರಾಯಚೂರು, ಏ 05- ಇಂದು ಸಿಂಧನೂರಿನ ಶ್ರಮಜೀವಿ ಭವನದಲ್ಲಿ ಕರ್ನಾಟಕ ರೈತ ಸಂಘ-ಎಐಕೆಕೆಎಸ್ ತಾಲೂಕು ಸಮಿತಿ ವಿಸ್ತೃತ ಸಭೆ ನಡೆಯಿತು. ಸರಾಸರಿ 25 ಗ್ರಾಮಗಳ ಪ್ರತಿನಿಧಿಗಳು ರೈತ ಹಾಗೂ ಕಾರ್ಮಿಕ ಮುಖಂಡ ಆರ್.ಮಾನಸಯ್ಯನವರು ಸಂಘದ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ ಹಾಗೂ ಮಾರುತಿ ಜಿನ್ನಾಪೂರ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ರೈತ ಸಂಘವು ರಾಜ್ಯಮಟ್ಟದಲ್ಲಿ ರೂಪಿಸಿದ ಭೂ ಸಂಘರ್ಷ ಪರ್ವದ ರೂಪರೇಷಗಳನ್ನು ವಿವರಿಸಿದರು. ರೈತ ಸಂಘ ಯಶಸ್ವಿಗೊಳಿಸಿದ ಭೂ ಹೋರಾಟಗಳ ಯಶೋಗಾಧೆಯನ್ನು ವಿವರಿಸಲಾಯಿತು.

ರಾಜ್ಯ ಬಿಜೆಪಿ ಸರಕಾರದ ಕಾರ್ಪೋರೇಟ್ ಹಾಗೂ ಭೂಮಾಲೀಕರ ಪರ ಭೂ ನೀತಿ ವಿರುದ್ಧ ಭೂ ರಹಿತ ರೈತರನ್ನು ಸಂಘಟಿಸಿ, ಭೂಸ್ವಾಧೀನಪಡಿಸಿಕೊಳ್ಳುವ ಹೋರಾಟವನ್ನು ಪ್ರಸ್ತಾಪಿಸಲಾಯಿತು. ಹೋರಾಟದ ಹೆಸರಿನಲ್ಲಿ ಭೂಮಿ ಬಿಕ್ಷೆ ಕೇಳುವುದು ಇಡೀ ರೈತ ಚಳುವಳಿಗೆ ಅವಮಾನ. ಸಂಘರ್ಷದ ಹಾದಿಯಲ್ಲಿ “ಊಳುವವನೇ ಭೂ ಒಡೆಯ ಎಂದು”’ ಹೋರಾಡಬೇಕೆಂದು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು.

ಈ ಸಭೆಯಲ್ಲಿ ಸಂಘಟನೆ ಬಲಪಡಿಸಲು ಮಹಿಳಾ ನಾಯಕತ್ವದ ರೈತ ಚಳುವಳಿ ಕಟ್ಟುವ ಸರಿಯಾದ ಸಂಘಟನಾ ಪದ್ಧತಿ ಪ್ರಕಾರ ನೂತನ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು.