ಹೋರಾಟದ ಫಲವೇ ಇಂದಿನ ಸ್ವಾತಂತ್ರೋತ್ಸವ ಆಚರಣೆಗೆ ನಾಂದಿ


ಸಂಜೆವಾಣಿ ವಾರ್ತೆ
ಸಂಡೂರು:ಅ: 16:  ದೇಶಕ್ಕೆ ಸ್ವಾತಂತ್ರ್ಯ ಬಂದದ್ದಲ್ಲ ಅದು ಪಡೆದುಕೊಂಡಿದ್ದು, ಸಾವಿರಾರು ದೇಶಪ್ರೇಮಿಗಳ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಆಚರಿಸುವ ಮೂಲಕ ಅವರ ಸ್ಮರಣೆಯನ್ನು ಮಾಡೋಣ ಎಂದು ಕ್ಷೇತ್ರ ಸಂಪನ್ಮೂಲಕ ಇಲಾಖೆಯ ಅಧಿಕಾರಿ ಜಕಣಾಚಾರಿ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಭಗತ್ ಸಿಂಗ್ ಅವರು ಈ ನಾಡಿನ ಮಣ್ಣನ್ನು ದೇವರೆಂದು ಪ್ರೀತಿಸಿ, ಪೂಜಿಸಿದಂತಹ ಮಹಾನ್ ದೇಶಭಕ್ತ, ಅವರ ಒಂದು ದೊಡ್ಡ ಹೋರಾಟ ನಮಗೆ ಮಾದರಿಯಾಗಿದೆ, ಸುಖದೇವ್, ತ್ಯಾತಾಟೋಪಿ, ಜಾನ್ಸಿರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಅಜಾದ್ ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಮಹಾನ್ ನಾಯಕರ ತ್ಯಾಗ, ಬಲಿದಾನದ ಫಲವಾಗಿ ನಾವು 1857ರಲ್ಲಿ ಸಿಪಾಯಿ ದಂಗೆಯ ಸಮಯದಲ್ಲಿಯೇ ಪಡೆಯಬೇಕಾದ ಸ್ವಾತಂತ್ರ್ಯ 1947ರ ವರೆಗೆ ಕಾಯುವಂತಹ ಸ್ಥಿತಿ ಉಂಟಾಯಿತು, ಕಾರಣ ನಮ್ಮಲ್ಲಿ ವೈಯಕ್ತಿಕ ಹಿತಾಸಕ್ತಿಯಿಂದ, ಇಂದು ನಾವು ಬಹಳಷ್ಟು ಸಮಸ್ಯೆಗಳಾಗಿ ಒಂದು ಕಡೆ ಮತೀಯವಾದ ಬೆಳೆದರೆ ಮತ್ತೊಂದು ಕಡೆದಪ್ರತ್ಯೇಕತಾ ವಾದ ಬೆಳೆಯುತ್ತಿರುವುದು ದೇಶದ ಪ್ರಗತಿ ಮತ್ತು ಏಕತೆಗೆ ಧಕ್ಕೆಯುಂಟಾಗುತ್ತಿದೆ, ನಮ್ಮ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎನ್ನುವುದನ್ನು ನಾವು ಯೋಚಿಸಬೇಕಾಗಿದೆ, ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಲ್ಲ ಅದರೊಂದಿಗೆ ಪ್ರಗತಿಯನ್ನು ಸಾಧಿಸಬೇಕಾಗಿದೆ, ಇಂದು ನಾವು ಚಂದ್ರಯಾನದಂತಹ ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದ್ದೇವೆ, ಅದರೆ ಮತ್ತೊಂದು ಕಡೆ ಜಾತಿ, ಧರ್ಮದ ಹೆಸರಿನಲ್ಲಿ ಅತ್ಯಾಚಾರ್, ಕೊಲೆ, ಸುಲಿಗೆ, ಭ್ರಷ್ಟಾಚಾರ ಬೆಳೆಯುತ್ತಿರುವುದು ಪ್ರಗತಿಗೆ ಮಾರಕವಾದುದು, ಅದ್ದರಿಂದ ನಾವು ಮತೀಯವಾದವನ್ನು ಬದಿಗಿಟ್ಟು ದೇಶನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನನ್ನು ಕೊಟ್ಟಿದ್ದೇವೆ ಎಂದು ಯೋಚಿಸುವ ಮೂಲಕ ನಮ್ಮ ನಾಡಿನ ರಕ್ಷಣೆಗೆ, ಸ್ವಾತಂತ್ರ್ಯಕ್ಕೆ ಹೋರಾಡಿದ ಎಲ್ಲರನ್ನು ಸ್ಮರಿಸೋಣ, ಅವರ ಕುರಿತು ಬರೆದ ಪುಸ್ತಕಗಳನ್ನು ಅಧ್ಯಾಯನ ಮಾಡುವ ಮೂಲಕ ದೇಶಪ್ರೇಮ ಬೆಳೆಸಿಕೊಳ್ಳುವುದರ ಜೊತೆಗೆ ಪ್ರಗತಿಯನ್ನು ಸಾಧಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಹುಚ್ಚುಸಾಬ್ ಮಾತನಾಡಿ ದೇಶಕ್ಕಾಗಿ ದುಡಿದ ಮಹಾನೀಯರನ್ನು ಸ್ಮರಿಸಿಕೊಳ್ಳುವ ಈ ದಿನ ನಾವು ಸ್ವಾತಂತ್ರದಿನವನ್ನು ಆಚರಿಸೋಣ, ಕಾರಣ ಅವರ ಸನ್ಮಾರ್ಗದಲ್ಲಿ ಸಾಗುವ ಮೂಲಕ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಜಾತಿ,ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯವನ್ನು ಮಾಡದೇ ದೇಶಕಟ್ಟುವ ಕಾರ್ಯ ಮಾಡೋಣ ಎಂದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಸಭೆಯಲ್ಲಿ ಉಪನ್ಯಾಸಕರಾದ ಪ್ರಿಯಾಂಕ ಠಾಕೂರ್, ಇ.ಜಿ.ಕೀಶೋರ್, ಇ.ಜಿ.ರೇಖಾ, ನರಸಿಂಹತಳವಾರ್, ಅರುಣ್, ಮಂದಾಲ್ ಶಂಕ್ರಪ್ಪ, ಮಂಜುನಾಥ, ಇತರ ಎಲ್ಲಾ ಅತಿಥಿ ಉಪನ್ಯಾಸಕರು, ಕಛೇರಿಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ ಬಣಕಾರ ನಿರೂಪಿಸಿದರು, ದೈಹಿಕವಿಭಾಗದ ಉಪನ್ಯಾಸಕ ನರಸಪ್ಪ ವಂದಿಸಿದರು.