ಹೋರಾಟದ ಫಲವಾಗಿ ೧೧ ಸಾವಿರ ಮನೆಗಳಿಗೆ ಹಕ್ಕು ಪತ್ರ ವಿತರಣೆ

ರಾಯಚೂರು,ಮಾ.೧೯- ಇಂದು ದೇವಿನಗರದ ಯುವಕರಿಂದ “ಹಕ್ಕು ಪತ್ರಗಳ ಮೂಲ ಹೋರಾಟ ಸಂಘಟನೆಗೆ ಅಭಿನಂದನೆ” ನಗರದ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ನಗರದ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.
ನಗರದ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಸಂಘಟನೆಯ ಅಧ್ಯಕ್ಷರು ಮತ್ತು ಸದಸ್ಯರು ಸತತ ೧೫-೨೦ ಹೋರಾಟದ ಪ್ರತಿಫಲವಾಗಿ ಇಂದು ದೇವಿನಗರದ ೭೦೦ ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ರಾಯಚೂರಿನ ಸುಮಾರು ೧೬ ಕ್ಕೂ ಹೆಚ್ಚಿನ ಸ್ಲಂ ಬಡಾವಣೆಗಳಿದ್ದು ೧೦.೦೦೦ ಕ್ಕೂ ಹೆಚ್ಚು ಮನೆಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ನಡೆಯುತ್ತಿದ್ದು. ಸ್ಲಂ ಬಡಾವಣೆಗಳಲ್ಲಿ ನಿವಾಸಿಸುವ (sಛಿ-sಣ-obಛಿ ಗಳಿಗೆ) ಬಹುಜನರಿಗೆ ಹಕ್ಕು ಪತ್ರ ಮತ್ತು ನಿರಾಶ್ರಿತರಿಗೆ ವಸತಿ ಕಲ್ಪಿಸುವ ಸಲುವಾಗಿ ನಿರಂತರ ೧೫-೨೦ ವರ್ಷ ಶ್ರಮಿಸಿದ ಸಂಘಟನೆಯ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಅಭಿನಂದನೆ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ್, .ನಾಗರಾಜ್, ಶ್ರೀನಿವಾಸ್, ತಿಮ್ಮಪ್ಪ, ಅರುಣ್, ಬಿಟ್ಟು, ಶ್ರೀಕಾಂತ್, ಅಂಜನ್ ಕುಮಾರ್, ಗುರು ಇನ್ನಿತರರು ಉಪಸ್ಥಿತರಿದ್ದರು