ಹೋರಾಟದ ಎಚ್ಚರಿಕೆಗೆ ಎಚ್ಚೆತ್ತ ಅಧಿಕಾರಿಗಳು ಶಿಥಿಲಗೊಂಡ ನೀರಿನ ಟ್ಯಾಂಕ್ ನೆಲಸಮ

ಯಾದಗಿರಿ:ಮಾ.4: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಪಸ್ಪೂಲ್ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಗಣಪೂರ ಪಡೆಯಲೆಂದೇ ಸುಮಾರು ವರ್ಷಗಳಿಂದ ಕೈಚಾಚಿ ನಿಂತಿರುವ ಶಿಥಿಲಗೊಂಡ ನೀರಿನ ಮೇಲ್ತೊಟ್ಟಿ ತಕ್ಷಣ ತೆರವು ಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ
ಉಮೇಶ ಕೆ. ಮುದ್ನಾಳ ಆಗ್ರಹಿಸಿದ ಹಿನ್ನೆಲೆಯಲ್ಲಿ ಶುಕ್ರವಾರ 03-03- 2023 ರಂದು ವಾರದ ಗಡುವು ನೀಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ಮೂರೇದಿನಗಳ್ಳಿ ಶಿಥಲಗೊಂಡ ನೀರಿನ ಟ್ಯಾಂಕ್ ನ್ನು ನೆಲಸಮಗೋಳಿಸಿದಕ್ಕೆ ಉಮೇಶ್ ಮುದ್ನಾಳ ಅವರು ಹರ್ಷ ವ್ಯಕ್ತಪಡಿಸಿದ್ದಾರೆ
ಕಳೆದ ವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಹಳೆ ಕಾಲದ ನೀರಿನ ಮೇಲ್ತೊಟ್ಟಿ ಶಿಥಿಲಗೊಂಡಿದ್ದು ರಾಡುಗಳು ತೇಲಿದ್ದು, ಮುಟ್ಟಿದರೆ ಉದುರಿ ಬೀಳುತ್ತಿದೆ. ಬಿರುಗಾಳಿ ಬಿಟ್ಟರೂ ಬೀಳುವ ಸ್ಥಿತಿಯಲ್ಲಿ ಇತ್ತು ಅಲ್ಲದೇ ಈ ಮದ್ಯೆ ಹೊಸ ನೀರಿನ ಎರಡು ತೊಟ್ಟಿಗಳನ್ನು ಒಂದು ವರ್ಷದಿಂದೆ ನೀರಿನ ಟ್ಯಾಂಕ್ ಉದ್ಘಾಟಿಸದೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು
ನೀರಿನ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಇದೆ ಎಂದು ಅವರು ಟೀಕಿಸಿದ್ದರು.ಶುಕ್ರವಾರ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಿಥಿಲಗೊಂಡ ಮೇಲ್ತೊಟ್ಟಿಯನ್ನು ಉಮೇಶ್ ಮುದ್ನಾಳ ಅವರ ಸಮ್ಮುಖದಲ್ಲಿ ನೆಲಸಮಗೊಳಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಶರಣಪ್ಪ ಹದನೂರ, ಶಂಕರ್ ಗಣಪೂರ, ಶ್ರೀನಿವಾಸ ಗಣಪೂರ, ಭೀಮರಾಯ ಪೂಜಾರಿ ಗ್ರಾಮ ಪಂಚಾಯತಿ ಸದಸ್ಯರು, ಅಂಜಪ್ಪ, ಭೀಮರಾಯ ಬಂಕಲಿಗಿ, ಸೇರಿದಂತೆ ಇತರರು ಇದ್ದರು.