ಹೋರಾಟಗಾರ ಕಾಳೆಗೆ ರಾಜ್ಯ ಯುವ ಒಕ್ಕೂಟದ ಪ್ರಶಸ್ತಿ ಪ್ರದಾನ

ಮುದ್ದೇಬಿಹಾಳ :ಜ.20: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಗೆ ಭಾಜನರಾದ ಮುದ್ದೇಬಿಹಾಳದ ಸಾಮಾಜಿಕ ಹೋರಾಟಗಾರ ಪ್ರಶಾಂತ ಕಾಳೆ ಅವರಿಗೆ ಬುಧವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವರಾದ ಬಿ.ಸಿ.ನಾಗೇಶ,ಎಸ್.ಅಂಗಾರ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಬಾಲಾಜಿ,ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ,ಮುದ್ದೇಬಿಹಾಳ ತಾಲೂಕಿನ ಪದಾಧಿಕಾರಿಗಳಾದ ಚಂದ್ರು ಕಲಾಲ,ರಾಜುಗೌಡ ತುಂಬಗಿ,ಮಹ್ಮದರಫೀಕ ಶಿರೋಳ,ಮೋದಿನ ಕಾರಗನೂರ ಮೊದಲಾದವರು ಇದ್ದರು.ಇದೇ ವೇಳೆ ಮಾತನಾಡಿದ ಪ್ರಶಸ್ತಿ ಪುರಸ್ಕøತರಾದ ಪ್ರಶಾಂತ ಕಾಳೆ ಅವರು, ನನಗೆ ಪ್ರಶಸ್ತಿ ಬಂದಿದ್ದು ಖುಷಿ ತಂದಿದ್ದು ಸಾಮಾಜಿಕ ಜೀವನದಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಿದಂತಾಗಿದೆ ಎಂದು ಹೇಳಿದರು.