ಹೋರಾಟಗಾರರ ವಿರುದ್ದ ಪ್ರಕರಣ ಖಂಡಿಸಿ ಹೋರಾಟ

????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ: ಸೆ.19: ತಾಲುಕಿನಲ್ಲಿ ನಡೆಯುತ್ತಿರುವ ಬ್ರಷ್ಟಾಚಾರದ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ಹೋರಾಟಗಾರರ ಮತ್ತು ಸಮಾಜ ಸೇವಕರ ಮೇಲೆ ಗೂಂಡಾ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಭಾರತದ ಸಂವಿದಾನದ ಪ್ರಜಾಭುತ್ವವ ವ್ಯವಸ್ಥೇಯನ್ನೇ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಇದರ ವಿರುದ್ಧ ಸಧ್ಯದಲ್ಲಿಯೇ ಸಂಬಂಧ ಪಟ್ಟ ಪೋಲಿಸ್ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ)ಹೇಳಿದರು.

ಭಾನುವಾರ ದೂರವಾಣಿಯೊಂದಿಗೆ ಮಾತನಾಡಿದ ಅವರು ಮುದ್ದೇಬಿಹಾಳ ಮತಕ್ಷೇತ್ರ ಇಡಿ 24 ಮತಕ್ಷೇತ್ರಗಳಲ್ಲಿ ಶಾಂತಿ ಸೌಮ್ಯ ರಾಜಕಾರಣಕ್ಕೆ ಹೆಸರಾಗಿದ್ದಲ್ಲದೇ ಗೂಂಡಾ ಚಟುವಟಿಗಳಿಲ್ಲದ ಏಕೈಕ ಮತಕ್ಷೇತ್ರವಾಗಿದೆ. ಚುನಾವಣೆಗಳು ಬಂದಾಗ ಸಾಮಾನ್ಯವಾಗಿ ಅವರವರ ಪಕ್ಷದ ಹಾಗೂ ಮುಖಂಡರ ಗೆಲುವಿಗಾಗಿ ಅವರ ಪರವಾದ ವಾದ ವಿವಾದಗಳು ನಡೆದು ಚುನಾವಣೆ ನಂತರ ಎಲ್ಲರೂ ಒಗ್ಗಟ್ಟಾಗಿ ಕೂಡಿ ಹೋಗುವುದು ಇಲ್ಲಿನ ಜನರ ಹಾಗೂ ಮುಖಂಡರ ವಿಶೇಷ ಗುಣವಾಗಿದೆ.

ಆದರೇ ಸಧ್ಯದ ಸ್ಥಳಿಯ ಶಾಸಕರ ರಾಜಕಾರಣವೇ ವಿಚಿತ್ರವಾಗಿದೆ ಮತಕ್ಷೇತ್ರದಲ್ಲಿ ಏನೇ ಎಷ್ಟೇ ಬ್ರಷ್ಟಾಚಾರ ನಡೆದರೂ ಹೋರಾಟಗಾರರು, ಜನಸಾಮಾನ್ಯರು, ಸಮಾಜಸೇವಕರು ಮೌನವಹಿಸಿ ಕಂಡು ಕಾಣದಂತೆ ಸುಮ್ಮನಿರಬೇಕು ಇಲ್ಲದಿದ್ದರೇ ಅವರ ಮೇಲೆ ಪೋಲಿಸ್ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ಒತ್ತಾಯಿಸಿ ಅವರ ಮೇಲೆ ಇಲ್ಲಸಲ್ಲದೆ ಯಾವೂದೇ ಆರೋಪಗಳಿಲ್ಲದೆ ಖೋಟ್ಟಿ ಪ್ರಕರಣ ದಾಖಲಿಸುವ ಮೂಲಕ ಹೋರಾಟಗಾರರ ಧ್ವನಿ ಇಲ್ಲದಂತೆ ಮಾಡಲಾಗುತ್ತಿದೆ.

ಸ್ವತಃ ನಾನೇ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಅಧಿಕಾರಿಗಳನ್ನು ಪ್ರಶ್ನೇ ಮಾಡಿದರೆ ನನ್ನ ಮೇಲೆ ದೂರು ದಾಖಲಿಸಲು ಮುಂದಾಗಿದ್ದು ಇಡಿ ತಾಲೂಕಿನ ಎಲ್ಲ ಜನರಿಗೆ ತಿಳಿದಿರುವ ಸಂಗತಿಯಾಗಿದೆ ಅದರಂತೆ ಸಧ್ಯ ಯಾವೂದೇ ಆರೋಪವಿಲ್ಲದೇ ಯಾವ ತಪ್ಪು ಮಾಡದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಹೋರಾಟ ನಡೆಸುತ್ತಿರುವ ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕೆಲ ಹೋರಾಟಗಾರರ ಮೇಲೆ ಸ್ಥಳಿಯ ಶಾಸಕರು ಪೋಲಿಸ್ ಇಲಾಖೆ ಅಧಿಕಾರಿಗಳ ಬಳಸಿಕೊಂಡು ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ ಜೊತೆಗೆ ನನ್ನ ಮೋಬೈಲ್ ನಂಬರಗಳನ್ನು ಕದ್ದಾಲಿಕೆ ಮಾಡುವ ಮೂಲಕ ನನ್ನ ಎಲ್ಲ ಖಾಸಗಿ ವ್ಯವಹಾರಗಳನ್ನು, ಇತರೇ ಸಾಮಾಜ ಮುಖಿ ಚಲನವನಗಳನ್ನು ಪತ್ತೆ ಹಚ್ಚುವುದರ ಜೊತೆಗೆ ನನ್ನನ್ನು ಇದೇ ಪ್ರಕರಣದಲ್ಲಿ ದಾಖಲಿಸುವ ಎಲ್ಲ ತರಹದ ಹುನ್ನಾರ ನಡೆಸಿದ್ದಾರೆ ಇದಕ್ಕೆ ಪ್ರತ್ಯಕ್ಷ ಸಾಕ್ಷೀ ತಾವೇ ಎಂದು ಹೇಳಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿರುವ ತಾಲೂಕಿನ ಕೆಲ ಪೋಲಿಸ್ ಇಲಾಖೆ ಅಧಿಕಾರಿಗಳ ದುರ್ನಡತೆ ಮತ್ತು ಪೋಲಿಸ್ ವ್ಯವಸ್ಥೇ ವಿರುದ್ಧ ಈಗಾಗಲೇ ವಿಜಯಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಅದರಂತೆಮುಂದಿನ ದಿನಗಳಲ್ಲಿ ಬಹಿರಂಗಾಗಿ ಉಗ್ರಹೋರಾಟ ನಡೆಸುವ ಮೂಲಕ ಸಂಬಂಧಪಟ್ಟ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಹಾಗೂಸರಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.