ಹೋಮಿಯೋಪಥಿ ವಿಚಾರ ಸಂಕಿರಣಕ್ಕೆ ಚಾಲನೆ

ದಾವಣಗೆರೆ. ಏ.೧೬; ಮಾನಸಿಕ ಕಾಯಿಲೆ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ ಎಂದು ಎಸ್ ಎಸ್ ಕೇರ್ ಟ್ರಸ್ಟ್ ನ ಮುಖ್ಯಸ್ಥರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ದಾವಣಗೆರೆ ನಗರದ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಹೋಮಿಯೋಪಥಿ ವೈದ್ಯಕೀಯ ಸಂಘದಿಂದ ಹಮ್ಮಿಕೊಂಡಿದ್ದ ವಿಚಾರಸಂಕಿರಣಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ  ನಂತರ ಮಾತನಾಡಿದ ಅವರು ಈಗ ಇರುವಂತಹ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಹೋಮಿಯೋಪತಿಯ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಆಗುವುದಿಲ್ಲ ಎಂದು ತಿಳಿಸಿದರು. ನಂತರ ಸಂಘದ ಪ್ರಧಾನ ಕಾರ್ಯದರ್ಶಿ ಮಾತನಾಡಿದ ಎ.ಎನ್. ಸುಂದರೇಶ್ ರವರು ಹೋಮಿಯೋಪಥಿ ವಿಚಾರ ಸಂಕಿರಣ   ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿರುವಂತಹ ಹಲವು ಜಿಲ್ಲೆಗಳಿಂದ ಜನರು ಬಂದಿರುವುದು ತುಂಬಾ ಖುಷಿವನ್ನುಂಟು ಮಾಡಿದೆ ಎಂದು ತಿಳಿಸಿದರು. ಈ ವೇಳೆ ಹೋಮಿಯೋಪಥಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಜಿ.ಎಫ್.ಮಾವಿಶೆಟ್ಟರ್, ಪ್ರಧಾನ ಕಾರ್ಯದರ್ಶಿ ಡಾ.ಎ.ಎನ್ ಸುಂದರೇಶ್ , ಪ್ರಭುದೇವ್, ಡಾ.ಕೆ.ಆರ್ ಶರತ್ ರಾಜ್,ಡಾ.ಹೆಚ್.ಎಸ್ ಪಾಂಡುರಂಗ, ಡಾ.ಜಿ.ಎಸ್ ಗಿರೀಶ್. ವಾಸುದೇವ್ ರಾಯ್ಕರ್. ಉಪಸ್ಥಿತರಿದ್ದರು