ಹೋಮಿಯೋಪಥಿ ಔಷಧಿ ರೋಗಿಗಳ ಪಾಲಿಗೆ ಸಂಜೀವಿನಿ

ಧಾರವಾಡ,ಏ6: ಹೋಮಿಯೋಪಥಿ ಔಷಧಿಯು ರೋಗಿಗಳ ಪಾಲಿಗೆ ಸಂಜೀವಿನಿ. ಇದು ಕೇವಲ ರೋಗವನ್ನು ಪರಿಹಾರ ಮಾಡುವುದು ಮಾತ್ರವಲ್ಲ, ರೋಗವನ್ನು ಸಂಪೂರ್ಣ ಬುಡದಿಂದ ಕಿತ್ತು ಹಾಕುತ್ತದೆ ಎಂದು ಬಿ.ಡಿ.ಜತ್ತಿ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಪ್ರಶಾಂತ ಕುಬಸದ ಹೇಳಿದರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ಎಚ್.ಎಚ್. ಸಿನ್ನೂರ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಹೋಮಿಯೋಪಥಿ ಒಂದು ಪರಿಪೂರ್ಣ ಚಿಕಿತ್ಸೆ ಹೇಗೆ? ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ಹೋಮಿಯೋಪಥಿಗೆ 240 ವರ್ಷಗಳ ಸುಧೀರ್ಘವಾದ ಇತಿಹಾಸವಿದೆ. ಜರ್ಮನಿಯ ಖ್ಯಾತ ವೈದ್ಯ ಸಾಮ್ಯುವೆಲ್ ಹ್ಯಾನಮನ್‍ಅವರ ಧೀರ್ಘವಾದ ಸಂಶೋಧನೆಯ ಫಲವಾಗಿ ಈ ಔಷಧಿ ಪದ್ಧತಿ ಪ್ರಾರಂಭವಾಯಿತು. ಏಪ್ರೀಲ್ 10 ಹ್ಯಾನಿಮನ್ ಅವರ ಜನ್ಮದಿನ ಹೀಗಾಗಿ ಆ ದಿನವನ್ನು ಹೋಮಿಯೋಪಥಿ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಧೀರ್ಘಕಾಲೀನ ರೋಗಗಳಿಗೆ ಇದು ರಾಮಬಾಣವಾಗಿದ್ದು ಜಗತ್ತಿನಲ್ಲೇ ಅತೀ ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಔಷಧಿ ಪದ್ಧತಿಯಾಗಿದೆ. ಈ ಔಷಧಿ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.

ಹೋಮಿಯೋಪಥಿ ಒಂದು ಸಮಗ್ರ ಆರೋಗ್ಯ ಚಿಕಿತ್ಸೆಯಾಗಿದೆ. ಕೊರೊನಾ ಹಾಗೂ ಚಿಕನ್ ಗುನ್ಯಾದಂತ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ರೋಗತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ. ಯಾವವು ರೋಗವನ್ನುಉಂಟು ಮಾಡುತ್ತಿದೆಯೋ ಅದನ್ನೇ ಔಷಧಿಯನ್ನಾಗಿ ಶಾಸ್ತ್ರೀಯ ಪದ್ಧತಿಯಲ್ಲಿ ರೋಗಿಯ ಮೇಲೆ ಪ್ರಯೋಗಿಸಿ ಪರಿಪೂರ್ಣ ಚಿಕಿತ್ಸೆ ಮಾಡಿ ರೋಗ ಗುಣಪಡಿಸುವ ಶಕ್ತಿ ಹೋಮಿಯೋಪಥಿಗಿದೆ ಎಂದರು.
ಹೋಮಿಯೋಪಥಿ ಶಕ್ತಿಹೀನತೆ, ಭಯ, ದುಗುಡ, ದುಃಖ ಕೋಪ ಹಾಗೂ ಒತ್ತಡಗಳಂತಹ ಭಾವನಾತ್ಮಕ, ಮಾನಸಿಕ ಹಾಗೂ ದೈಹಿಕ ಲಕ್ಷಣಗಳನ್ನು ಹುಡುಕಿಚಿಕಿತ್ಸೆ ನೀಡುವುದರಿಂದ ಇದೊಂದು ಪರಿಪೂರ್ಣ ಚಿಕಿತ್ಸೆಯಾಗಿದೆ.ಈ ಔಷಧಿ ಪದ್ದತಿ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದು ಸುಮಾರು 25 ಕೋಟಿಜನಚಿಕಿತ್ಸೆ ಪಡೆಯುತ್ತಿದ್ದಾರೆ.ಇದುಉಳಿದ ಔಷಧಿ ಪದ್ಧತಿಗಿಂತ ನಿರೀಕ್ಷಿತ ಫಲ ನೀಡುವಔಷಧಿ ಪದ್ಧತಿಯಾಗಿದೆಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿಡಾ.ಶಾಂತಾಇಮ್ರಾಪೂರಗುಡ್ಡಾಪುರದಚಿಜ್ಯೋತಿದಾನಮ್ಮದೇವಿ ಕಾದಂಬರಿ ಪರಿಚಯಿಸಿ ಮಾತನಾಡಿ, ದಾನಮ್ಮದೇವಿ ದಕ್ಷಿಣ ಭಾರತದ ಭಕ್ತರ ಪಾಲಿನ ಕಾಮದೇನು. ಬೇಡಿ ಬಂದವರಿಗೆ ವರದಾತೆ. ಇವಳ ದಾನಗುಣದಿಂದಲೇ ಬಸವಣ್ಣದಾನಮ್ಮನೆಂದುಕರೆದಿದ್ದಾರೆ.ಮಹಾನ್‍ಜ್ಞಾನಯೋಗಿ, ಕರ್ಮಯೋಗಿ, ಶಿವಯೋಗಿಯಾದ ದಾನಮ್ಮತನ್ನ ಪವಾಡಗಳಿಂದ ಭಕ್ತರ ಭಾವಕೋಶದಲ್ಲಿ ಸ್ಮರಣೀಯಳಾಗಿದ್ದಾಳೆ. ಶಾಂತಲಾಯಡ್ರಾವಿ ಕೃತಿರಚನೆಗೆ ಪರಿಶ್ರಮವಹಿಸಿದ್ದಾರೆ ಎಂದರು.
ಶಾಂತಲಾಯಡ್ರಾವಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಾಶಿವಶರಣೆಯ ಬಗ್ಗೆ ಕೃತಿರಚಿಸಲು ನನಗೊಂದು ಅವಕಾಶ ದೊರತದ್ದು ಸೌಭಾಗ್ಯಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಾಳಣ್ಣ ಶೀಗಿಹಳ್ಳಿ, ಸುಭಾಷ ಹತ್ತಿಕಾಳ, ನಿಂಗಣ್ಣಕುಂಟಿ, ಲೀಲಕ್ಕ ಬೆಲ್ಲದ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಅನ್ನಪೂರ್ಣಾ ತಾಳಿಕೋಟಿ, ಶೈಲಜಾ ನಾಯಕ, ಸೀತಾ ಛಪ್ಪರ, ಶಶಿಕಲಾ ಪಾಟೀಲ, ಡಾ. ಬಸವರಾಜ ಶೀಲವಂತರ, ಶಕುಂತಲಾ ಅಯ್ಯನಗೌಡರ, ವೀಣಾ ಸಂಕನಗೌಡರ, ಸರೋಜಾ ಪಂಡಿತ, ಎಂ.ಎಸ್. ನರೇಗಲ್ಲ ಹಾಗೂ ಬೆಲ್ಲದ, ಹಾಲಭಾವಿ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.