
ಕಲಬುರಗಿ,ಆ.22: ಇತ್ತೀಚಿಗೆ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕಲಬುರಗಿಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಸರ್ವಜ್ಞ ಚಿಣ್ಣರ ಲೋಕ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪದಕಗಳನ್ನು ತಮ್ಮದಾಗಿಸಿಕೊಂಡಿದೆ.
ದಿನಾಂಕ: 16-08-2023 ರಂದು ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯ, ದಕ್ಷಿಣ ವಲಯ, ಕಲಬುರಗಿ ಇವರು ಆಯೋಜಿಸಿರುವಂತಹ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ಮಕ್ಕಳಾದ ನಾಯಕ ಅಮನ್ ಮತ್ತು ತಂಡದ ಸದಸ್ಯರು ಥ್ರೋಬಾಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಇದರ ಜೊತೆಯಲ್ಲಿ ಮೇಲಾಟಗಳಾದ (ಅಥ್ಲೆಟಿಕ್ಸ್) 100 ಮೀಟರ್ ಓಟ ಹಾಗೂ 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದು ಕುಮಾರ ಸಾಗರ್ ಹಾಗೂ ಕುಮಾರಿ ಅಂಕಿತಾ ಶಾಲೆಗೆ ಒಳ್ಳೆಯ ಹೆಸರನ್ನು ತಂದಿದ್ದಾರೆ.
ಈ ಎಲ್ಲಾ ಮಕ್ಕಳ ಯಶಸ್ಸನ್ನು ಕಂಡು ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ, ಸರ್ವಜ್ಞ ಚಿಣ್ಣರ ಲೋಕದ ಶೈಕ್ಷಣಿಕ ನಿರ್ದೇಶಕಿಯರಾದ ಶ್ರೀಮತಿ ಸಂಗೀತಾ ಎ. ಪಾಟೀಲ, ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯಕುಮಾರ ನಾಲವಾರ್, ಸಂಯೋಜಕಿಯರಾದ ಶ್ರೀಮತಿ ಕವಿತಾ ಎ. ಪಾಟೀಲ ಮತ್ತು ದೈಹಿಕ ಶಿಕ್ಷಕರಾದಂತಹ ಶ್ರೀ ಗುರುರಾಜ ಜಾಂಬೋ, ಇತರ ದೈಹಿಕ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕ ವೃಂದದವರು ಹರ್ಷವ್ಯಕ್ತಪಡಿಸಿದರು.