ಹೋತಪೇಠ ಗ್ರಾ. ಪಂ. ಸಮಿತಿಗಳ ರಚನೆ

ಶಹಾಪುರ:ಎ.23:ಕೋವಿಡ್ -19 ವೈರಸ್‍ನಿಂದಾಗಿನ ತಿಂಗಳುಗಳ ಕಾಲ ಶಾಲೆಗಳಿಗೆ ಬಿಗಬಿದ್ದಾಗಿನಿಂದ ಮಕ್ಕಳು ಶಾಲೆಗೆ ಹಾಜರಾಗದೆ ಕೂಲಿ ಕೆಲಸ ತೆರಳುತ್ತಿದ್ದು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನದಟ್ಟು ಅಂತಹ ಮಕ್ಕಳ ಸರ್ವೆ ಮಾಡಿ ಧಾಖಲಾತಿಗಳನ್ನು ವದಗಿಸಬೇಕು ಮತ್ತು ಪಂಚಾಯತ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಶೌಚಾಲಯಗಳ ಸರ್ವೆ ಜೊತೆಗೆ ಎಷ್ಟು ಪರಿಣಾಮಕಾರಿ ಉಪಯೋಗಿಸಲಾಗುತ್ತಿದೆ. ಮತ್ತು ಅವುಗಳನ್ನು ಬಳಕೆ ಮಾಡಲು ಜನರಿಗೆ ತಿಳಿ ಹೇಳಬೇಕು ಎಂದು ಪಂಚಾಯತ ಅಭಿವೃದ್ದಿ ಅಧಿಕಾರಿ ಯಮನೂರಪ್ಪ ತಿಳಿಸಿದರು.

ತಾಲೂಕಿನ ಹೋತಪೇಠ ಗ್ರಾಮ ಪಂಚಾಯತನಲ್ಲಿ ನಡೆದ ಎರಡನೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಂಚಾಯತ ಅಭಿವೃದ್ದಿ ಹೊಂದಬೇಕಾದರೆ ಸರ್ವ ಸದಸ್ಯರು ಆಯಾ ವಾರ್ಡನಲ್ಲಿ ಕುಂದುಕೊರತೆಗಳನ್ನು ಬರದಂತೆ ನೋಡಿಕೊಳ್ಳಬೇಕು ಆ ಕಾರಣದಿಂದ ಸಮಿತಿಗಳನ್ನು ರಚಿಸುತ್ತಿದ್ದೆವೆ ಎಂದು ನುಡಿದರು.

ಸಮಿತಿಗಳು : 1) ಸಾಮಾನ್ಯ ಸ್ಥಾಯಿ ಸಮಿತಿ- ಅಧ್ಯಕ್ಷರು ಅಶೋಕ ಪ್ಯಾಟಿ ಮತ್ತು 4 ಜನ ಸದಸ್ಯರು. 2) ಹಣಕಾಸು ಲೆಕ್ಕ ಪರಿಶೋಧನಾ ಸಮಿತಿ- ಅಧ್ಯಕ್ಷರು ದೇವಮ್ಮ ನಾಟೇಕರ್ ಮತ್ತು 4 ಜನ ಸದಸ್ಯರು. 3) ಸಾಮಾಜಿಕ ಸ್ಥಾಯಿ ಸಮಿತಿ- ಅಧ್ಯಕ್ಷರು ಪಾಂಡುರಂಗ ಮಡ್ನಾಳ ಮತ್ತು 4 ಜನ ಸದಸ್ಯರು. 4) ಕೋವಿಡ್ ಟಾಸ್ಕ ಫೋರ್ಸ- ಅಧ್ಯಕ್ಷರು ದೇವಮ್ಮ ನಾಟೇಕರ್, ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು, ಸಿಬ್ಬಂದಿಗರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು.

ಇದೇ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರಾದ ದೇವಮ್ಮ ನಾಟೇಕರ್, ಉಪಾಧ್ಯಕ್ಷರಾದ ಅಶೋಕ ಪ್ಯಾಟಿ, ಕಾರ್ಯದರ್ಶಿ ಇಮತಾಜ್, ಕಂಪ್ಯೂಟರ್ ಆಪರೇಟರ್ ದೇವಪ್ಪ, ಬಿಲ್ ಕಲೆಕ್ಟರ್ ಕಾಜಾಸಾಬ್ ಪಂಚಾಯತನ ಸರ್ವ ಸದಸ್ಯರು ಗ್ರಾಮದ ಗಣ್ಯರು ಸೇರಿದಂತೆ ಇತರರು ಇದ್ದರು.