ಹೋಟೆಲ್ ಗೆ ನುಗ್ಗಿದ ಕಾರು -ಮೂವರಿಗೆ ಗಾಯ

ಕೂಡ್ಲಿಗಿ. ಜ. 11:- ನಿಶ್ಚಿತಾರ್ಥಕ್ಕೆಂದು ಹೊರಟಿದ್ದ ಕಾರು ರಸ್ತೆ ಬದಿಯ ಹೋಟೆಲ್ ಗೆ ನುಗ್ಗಿದ ಪರಿಣಾಮ ಕಾರಿನಲ್ಲಿದ್ದ ಯುವತಿ ಮತ್ತು ಹೋಟೆಲ್ ದಂಪತಿ ಸೇರಿ ಮೂವರಿಗೆ ಗಾಯವಾಗಿರುವ ಘಟನೆ ಭಾನುವಾರ ಮದ್ಯಾಹ್ನ ಸೋವೇನಹಳ್ಳಿಲಿ ಜರುಗಿದೆ.
ಸೋವೇನಹಳ್ಳಿ ಹೋಟೆಲ್ ನ ಮಾಲೀಕ ದಂಪತಿಗಳಾದ ಸುಶೀಲಮ್ಮ (50), ಮಹೇಶ (65)ಮತ್ತು ಕಾರಿನಲ್ಲಿದ್ದ ಬಿಂದುಶ್ರೀ (18) ಗಾಯಗೊಂಡವರಾಗಿದ್ದು ಇವರನ್ನು ತಕ್ಷಣ 108ರ ಅಂಬ್ಯುಲೆನ್ಸ್ ನಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿಯಿಂದ ಸೋವೇನಹಳ್ಳಿಲಿ ನಿಶ್ಚಿತಾರ್ಥ ಕ್ಕೆಂದು ಕಾರಿನಲ್ಲಿ ಚಾಲಕ ಸೇರಿ ನಾಲ್ಕು ಜನರು ಹೋಗುತ್ತಿದ್ದು ಇನ್ನೇನು ಕಾರ್ಯಕ್ರಮಕ್ಕೆ ಹೋದೇವು ಅನ್ನುವಷ್ಟರಲ್ಲಿ ರಸ್ತೆಯಲ್ಲಿದ್ದ ಹಮ್ಸ್ ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯ ಹೋಟೆಲ್ ನುಗ್ಗಿದೆ ಅದೃಷ್ಟವಶಾತ್ ಹೋಟೆಲ್ ದಂಪತಿ ಬಿಟ್ಟು ಯಾರು ಇದ್ದಿರಲಿಲ್ಲ ದಂಪತಿಗೆ ಮತ್ತು ಕಾರಿನಲ್ಲಿದ್ದ ಯುವತಿಗೆ ಗಾಯವಾಗಿದ್ದು ಕಾರಿನ ಚಾಲಕ ಪರಾರಿಯಾಗಿದ್ದನೆಂದು ತಿಳಿದಿದೆ. ಗಾಯಾಳುಗಳು ಕೂಡ್ಲಿಗಿ ಆಸ್ಪತ್ರೇಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.