ಹೋಟೆಲ್ ಗಳಲ್ಲಿ ಶುದ್ಧಕುಡಿಯುವ ನೀರು ಕೊಡಲು ಮನವಿ. 


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ. 11 :-  ಪಟ್ಟಣದಲ್ಲಿರುವ ಮುಖ್ಯವಾದ ಹೋಟೆಲ್ ಗಳಲ್ಲಿ ಗ್ರಾಹಕರಿಗೆ  ಶುದ್ಧಕುಡಿಯುವ ನೀರನ್ನು ಕೊಡದೆ ಜನರನ್ನು ಅನಾರೋಗ್ಯಕ್ಕೆ ತುತ್ತು ಮಾಡುತ್ತಿದ್ದು ಶುದ್ಧ ನೀರು ಕೊಟ್ಟು  ಅದನ್ನು ಸರಿಪಡಿಸುವಂತೆ ಕೂಡ್ಲಿಗಿ ಸಿಐಟಿಯು ನೇತೃತ್ವದಲ್ಲಿ ಇಂದು ಪ್ರತಿಭಟನೆ ಮಾಡುವ ಮೂಲಕ  ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ ಮನವಿ ಸಲ್ಲಿಸಿದರು.
ಇಂದು ಮಧ್ಯಾಹ್ನ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ , ಸಿಐಟಿಯು  ಹಾಗೂ ಸಿಡಬ್ಲ್ಯೂ ಎಫ್ ಐ ಜನವಾದಿ ಮಹಿಳೆ ಸಂಘ ತಾಲೂಕು ಸಮಿತಿ ಕೂಡ್ಲಿಗಿ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಸಿಐಟಿಯು ತಾಲೂಕು ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ಪಟ್ಟಣದ ಅನೇಕ ತಿಂಡಿ ಹಾಗೂ ಊಟದ  ಹೋಟೆಲ್ ಗಳಿಗೆ ತಿನ್ನಲು ಹೋದ ಜನರಿಗೆ ಶುದ್ಧವಲ್ಲದ ನೀರನ್ನು ಕುಡಿಯಲು ಕೊಡುತ್ತಿದ್ದಾರೆ ಇದರಿಂದ ಫ್ಲೋರೈಡ್ ಅಂಶ ಹೆಚ್ಚಾಗಿರುವ ತಾಲೂಕಿನಲ್ಲಿ ವಿಕಲಚೇತನರಾಗುವ ಲಕ್ಷಣ ಕಾಣಬಹುದು ಇದರಿಂದಾಗಿ ಹೋಟೆಲ್ ಮಾಲೀಕರು ಹಣದ ಕಡೆ ಗಮನಹರಿಸುವಂತೆ ಜನರ ಆರೋಗ್ಯದ ಹಿತದೃಷ್ಠಿ ಇಟ್ಟುಕೊಂಡು ಹೋಟೆಲ್ ಗೆ ಬಂದ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಕೊಡುವಂತೆ ಸಿಐಟಿಯು ನ ಮುಖಂಡ ಗುನ್ನಳ್ಳಿ ರಾಘವೇಂದ್ರ ತಿಳಿಸಿದರು ಹಾಗೂ ಈ ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಇವರಿಗೆ ನೀಡಿರುವ ಹೋಟೆಲ್ ಲೈಸೆನ್ಸ್ ರದ್ದು ಮಾಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಎಚ್ಚರಿಸಿದರು
ಈ ಸಂದರ್ಭದಲ್ಲಿ  ಟಿ ಭಾಗ್ಯ, ಕರಿಯಣ್ಣ, ಹೂಲೆಪ್ಪ, ಶಾರದಮ್ಮ, ಮಾರೇಶ, ಕೊಟ್ರೇಶ, ಸಾಯಿಕುಮಾರ ಹಾಗೂ ಇತರರು ಉಪಸ್ಥಿತರಿದ್ದರು.

One attachment • Scanned by Gmail