ಹೋಟೆಲ್ ಅನಂತ ಶುಭಾರಂಭದಲ್ಲಿ ಅಪ್ಪು ನೆನೆದು ಭಾವುಕರಾದ ಗುರುಕಿರಣ್

ಕಲಬುರಗಿ:ನ.22:ಅಪ್ಪು ಮೇರು ಕಲಾವಿದ ಅವರ ಬಗ್ಗೆ ಹೇಳಲು ಶಬ್ದಗಲೇ ಇಲ್ಲ. ಅಂತಹ ಕಲಾವಿದ ನಮ್ಮೊದನಿಲ್ಲ ಅನ್ನುವುದು ನಂಬಲಾಗದು ಎಂದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಭಾವುಕರಾಗಿ ನುಡಿದರು.
ಅವರು ನ 21 ರಂದು ಕಲಬುರಗಿಯ ಹೋಟೆಲ್ ಅನಂತ ಶುಭಾರಂಭದಲ್ಲಿ “ಅಪ್ಪು ನಮನ ” ವಿಶೇಷ ಗಣ ನಮನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅಪ್ಪು ನಮನದ ಮೂಲಕ ಶುಭಾರಂಭ ಮಾಡಿರುವುದು ಕಲಾವಿದನ ಮಾನವೀಯ ಸೇವೆಗೆ ದೊರೆತ ಪುರಸ್ಕಾರ ಎಂದು ಗದ್ಗೀತರಾಗಿ ನುಡಿದರು.
ಕಲಬುರಗಿಗೆ 10ವರ್ಷಗಳ ನಂತರ ಆಗಮಿಸುತ್ತಿದ್ದು ತಮ್ಮೆಲ್ಲರ ಪ್ರೀತಿಗೆ ಋಣಿ . ಅಪ್ಪು ನಮನದ ಈ ಕಾರ್ಯಕ್ರಮ ಅರ್ಥಪೂರ್ಣ ಭಾಗವಹಿಸಿದ ನಿಮಗೆಲ್ಲರಿಗೂ ಪ್ರೀತಿಯ ನಮಸ್ಕಾರ ಎಂದು ಅಭಿನಂದಿಸಿದರು.ಅಭಿಮಾನಿಗಳು ಹಾಡಲು ಒತ್ತಾಯಿಸಿದಾಗ ಇನ್ನೊಂದು ಬಾರಿ ಬಂದು ನಿಮ್ಮ ಕೇಳಿಕೆ ಈಡೇರಿಸುವೆ ಎಂದು ಅಭಿಮಾನಿಗಳ ಚೀರಾಟದ ನಡುವೆ ಹೇಳಿದರು. ತುಂತುರು ಮಳೆ ಲೆಕ್ಕಿಸದೆ ಜನ ಸೇರಿದ್ದರು. ನೂರಾರು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಕೈಕುಲುಕಿ ಅಭಿಮಾನ ವ್ಯಕ್ತಪಡಿಸಲು ಮುನ್ನುಗ್ಗುವುದು ಸಾಮಾನ್ಯವಾಗಿತ್ತು.
ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಕುಂದಾಪುರದ ಮನು ಹಂದಾಡಿ, ಕಟ್ಟಡ ಮಾಲಕ ಸಂತೋಷ್ ವರ್ಗಿಸ್,ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ,ವೆಂಕಟೇಶ್ ಕಡೇಚೂರ್, ಪ್ರವೀಣ್ ಜತ್ತನ್, ಸುರೇಶ್ ಶೆಟ್ಟಿ ಮುಂಬೈ, ರಾಜೇಶ್ ಗುತ್ತೇದಾರ್, ರಾಜ ರಾಮಪ್ಪ ನಾಯಕ್, ಪ್ರಮೋದ್ ದೇಶಪಾಂಡೆ, ನರಸಿಂಹ ಮೆಂಡನ್ ಮತ್ತಿತರರು ಇದ್ದರು.
ಸರಿಗಮ ಸಂಗೀತ ಕಲಾವಿದರು ಪುನೀತ್ ರಾಜ್ಕುಮಾರ್ ನಟಿಸಿದ ಚಿತ್ರಗಳ ಹಾಡುಗಳನ್ನು ಹಾಡಿ ಅಪ್ಪು ನಮನದಲ್ಲಿ ಗಾನ ನಮನ ಸಲ್ಲಿಸಿದರು.ಡಾ ಸದಾನಂದ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.