ಹೊಸ ಹೇರ್ ಲುಕ್‌ನಲ್ಲಿ ಮೇಘನಾ

ಬೆಂಗಳೂರು,ಮೇ.೨-ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಬಣ್ಣದ ಲೋಕಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದು, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈಗ ಹೊಸದೊಂದು ಸಿನಿಮಾಗಾಗಿ ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ನಟ ಚಿರಂಜೀವಿ ನಿಧನದ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿ ಮೇಘನಾ ರಾಜ್ ನಟಿಸಿರಲಿಲ್ಲ. ಆದರೆ ಈಗ ತತ್ಸಮ ತದ್ಬವ ಎಂಬ ಹೊಸ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಮತ್ತೆ ಎಂಟ್ರಿಯಾಗುತ್ತಿದ್ದಾರೆ.
ನಟಿ ಮೇಘನಾ ಹೊಸ ಹೇರ್‌ಸ್ಟೈಲ್ ಮಾಡಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವರು ಲೈಕ್ಸ್ ಬಂದಿದ್ದು, ಮೇಘನಾ ಅವರಿಗೆ ಹೊಸ ಹೇರ್ ಸ್ಟೈಲ್ ಮ್ಯಾಚ್ ಆಗ್ತಿದೆ ಎಂದು ಕೆಲವರು ಹೇಳಿದ್ದಾರೆ. ಗುಡ್ ಲುಕ್. ಸೂಪರ್, ನಿಮ್ಮನ್ನು ಒಂದು ಖಡಕ್ ಪಾತ್ರದಲ್ಲಿ ನೋಡೋಕೆ ಕಾಯ್ತಾ ಇದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಉದ್ದನೆಯ ಕೂದಲು ಸಹ ಮೇಘನಾ ರಾಜ್ ಅವರಿಗೆ ಚೆಂದ ಕಾಣ್ತಾ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಪಾತ್ರಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದೇ ತಾನೇ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಮೇಘನಾ ರಾಜ್ ಸ್ಟ್ರಾಂಗ್ ಆಗಿ ತಮ್ಮ ಜೀವನ ಲೀಡ್ ಮಾಡ್ತಾ ಇದ್ದಾರೆ. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಈಗ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.
ತತ್ಸಮ ತದ್ಭವದ ಫಸ್ಟ್ ಲುಕ್ ರಿಲೀಸ್ ಆದಾಗ ಎಲ್ಲರೂ ಇಷ್ಟ ಪಟ್ಟಿದ್ದರು. ಮೇಘನಾ ರಾಜ್ ತುಂಬಾ ಸ್ಟ್ರಾಂಗ್ ಲೇಡಿ ತರ ಕಾಣ್ತಾ ಇದ್ದರು. ಇನ್ನೂ ಸಿನಿಮಾ ಹೇಗಿರಬಹುದು ಎಂದು ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ.