ಹೊಸ ಸರಕಾರ ಮತ್ತು ಕಲ್ಯಾಣದ ಕಲ್ಯಾಣ ಕುರಿತು28ಕ್ಕೆ ಸಮಿತಿಯ ದುಂಡು ಮೇಜಿನ ಸಭೆ

ಕಲಬುರಗಿ,ಮೇ.26: ಮೇ.28 ರಂದು ರವಿವಾರ ಬೆಳಿಗ್ಗೆ 11.30 ಗಂಟೆಗೆ ಕಲ್ಯಣ ಕರ್ನಾಟಕ ಹೋರಾಟ ಸಮಿತಿಯ ಸಭೆಯನ್ನು ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ನಿಯೋಜಿಸಲಾಗಿದೆ. ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಜರುಗುವ ಈ ಸಭೆಯಲ್ಲಿ ನೂತನ ಸರಕಾರದ ಮುಂದೆ ಇರುವ ಕಲ್ಯಾಣ ಕರ್ನಾಟಕದ ಸಮಸ್ಯೆ ಸವಾಲುಗಳು ಮತ್ತು ಮುಂದಿನ ಅಭಿವೃದ್ಧಿಯ ಕುರಿತು ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲು ಈ ದುಂಡು ಮೇಜಿನ ಸಭೆ ಕರೆಯಲಾಗಿದೆ.
ಈ ಮಹತ್ವದ ದುಂಡು ಮೇಜಿನ ಸಭೆಯಲ್ಲಿ ಸಮಿತಿಯ ಕ್ರೀಯಾ ಸದಸ್ಯರ ಸಲಹೆ ಸೂಚನೆಯ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ಕುರಿತು ಚರ್ಚಿಸಿ ಮುಂದಿನ ರೂಪ ರೇಷೆಗಳನ್ನು ಹಮ್ಮಿಕೊಳ್ಳಲಾಗುವುದು. ಈ ಮಹತ್ವದ ಸಭೆಗೆ ಸಮಿತಿಯ ಕ್ರೀಯಾ ಸದಸ್ಯರು ತಪ್ಪದೇ ಹಾಜರಾಗಲು ಸಮಿತಿಯು ಪ್ರಕಟಣೆಯ ಮೂಲಕ ತಿಳಿಸಿದೆ.