ಹೊಸ ಸಂಸತ್ ಭವನ ನಿರ್ಮಾಣ: 861.9 ಕೋಟಿಗೆ ಟಾಟಾ ಸಂಸ್ಥೆಯ ಪಾಲು

ನವದೆಹಲಿ, ಸೆ.16- ನೂತನ ಸಂಸತ್ ಭವನವನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಮುಂದಾಗಿದ್ದು ಅದರ ನಿರ್ಮಾಣ ಜವಾಬ್ದಾರಿ 861.9 ಕೋಟಿ ರೂಪಾಯಿ ಮೊತ್ತದ ಟೆಂಡರ್ ಟಾಟಾ ಸಂಸ್ಥೆಯ ಪಾಲಾಗಿದೆ.

ಮತ್ತೊಂದು ದೈತ್ಯ ಸಂಸ್ಥೆ ಲಾರ್ಸನ್ ಅಂಡ್ ಟಬ್ರೋ 865 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡುವುದಾಗಿ ಹೇಳಿತ್ತು ಮ ಕಡಿಮೆ ಮೊತ್ತ ದಾಖಲು ಮಾಡಿದ್ದ ಟಾಟಾ ಸಂಸ್ಥೆಯ ಪಾಲಾಗಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆ ನೂತನ ಸಂಸತ್ ಭವನ ನಿರ್ಮಾಣಕ್ಕಾಗಿ ಹಣಕಾಸು ಬಿಡ್ ಕರೆದಿತ್ತು. ಟಾಟಾ ಮತ್ತು ಲಾರ್ಸೆನ್ ಅಂಡ್ ಟಬ್ರೋ ಪ್ರಮುಖ ಬಿಡ್ಡರ್ ರಾಗಿ ಪಾಲ್ಗೊಂಡಿದ್ದವು.

ಈಗಾಗಲೇ ಸಂಸದ್ ಭವನ ಇದ್ದು ಅದರ ಜೊತೆಗೆ ಇನ್ನೊಂದು ನೂತನ ಸಂಸತ್ ಭವನವನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಈ ಹಿನ್ನೆಲೆಯಲ್ಲಿ ಭವನ ನಿರ್ಮಾಣ ಮಾಡಲು ಮುಂದಾಗಿದೆ.

ನೂತನ ಸಂಸತ್ ಭವನ ನಿರ್ಮಾಣಕ್ಕೆ ಸರಿಸುಮಾರು 940 ಕೋಟಿ ರುಪಾಯಿ ಖರ್ಚಾಗಲಿದೆ ಎಂದು ಸರ್ಕಾರದ ಲೋಕೋಪಯೋಗಿ ಇಲಾಖೆ ಅಂದಾಜು ಮಾಡಿತ್ತು ಆದರೆ ಸಂಸ್ಥೆ 861 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವುದಾಗಿ ಮುಂದೆ ಬಂದಿದೆ.
ಮುಂದಿನ ಒಂದು ವರ್ಷದ ಒಳಗೆ ದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣ ಆಗಲಿದೆ.

ಹಾಲಿ ಇರುವ ಸಂಸದ್ ಭವನ ಬ್ರಿಟಿಷ್ ಕಾಲದಲ್ಲಿ ನಿರ್ಮಾಣ ಮಾಡಿರುವುದು ಆಗಿದೆ ಹಿನ್ನೆಲೆಯಲ್ಲಿ ಅದರ ನವೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಇದರ ಜೊತೆಗೆ ಹೊಸ ಸಂಸತ್ ಭವನವನ್ನು ನಿರ್ಮಾಣ ಮಾಡಲು ಉದ್ದೇಶಿಸಿ ಟೆಂಡರ್ ಕರೆಯಲಾಗಿತ್ತು.

ಹಾಲಿ ಇರುವ ಸಂಸತ್ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಸೂಕ್ತ ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ವಿಶಾಲವಾದ ಸಂಸತ್ ಭವನ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಹಾಲಿ ಸಂಸತ್ ಭವನ ಇರುವಾಗ ಮತ್ತೊಂದು ಸಂಸತ್ ಭವನ ನಿರ್ಮಾಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಹಲವು ಪಕ್ಷಗಳು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿವೆ.