ಹೊಸ ಸಂಸತ್ ಭವನದಲ್ಲಿ ಅಧಿವೇಶನ

ನವದೆಹಲಿ,ಸೆ.೮- ಈ ತಿಂಗಳ ೧೮ ರಿಂದ ೨೨ ರವರೆಗೆ ನಿಗದಿಯಾಗಿರುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಹೊಸ ಸಂಸತ್ತಿನ ಕಟ್ಟಡದಲ್ಲಿ ನಡೆಯುವ ಸಾಧ್ಯತೆಯಿದೆ
ಅಧಿವೇಶನದ ಮೊದಲ ದಿನ ಹಳೆ ಕಟ್ಟಡದಲ್ಲಿ ನಡೆದರೆ, ಉಳಿದ ಭಾಗದ ಕಲಾಪ ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸ್ಪಷನೆ ನೀಡಿಲ್ಲ.
ವಿಶೇಷ ಅಧಿವೇಶನವನ್ನು ಆಯೋಜಿಸಲು ಹೊಸ ಕಟ್ಟಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಲೋಕಸಭೆಯ ಅಧಿಕಾರಿಗಳು ತಿಳಿಸಿದ್ದಾರೆ, ವಿಶೇಷ ಅಧಿವೇಶದ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ.
ಹೊಸ ಕಟ್ಟದಲ್ಲಿ ಅಧಿವೇಶನ ನಡೆಸಲು ಪೂರಕವಾಗಿ “ಭೌತಿಕ ರಚನೆ ಸಿದ್ಧವಾಗಿದ್ದು, ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಸಂಬಂಧಿಸಿದ ಇಲಾಖೆಗಳು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಚೇರಿ, ಶಾಸಕಾಂಗ ಪಕ್ಷದ ಕಚೇರಿ ಮತ್ತು ನೋಟಿಸ್ ಕಚೇರಿಯಂತಹ ಕೆಲವು ಇಲಾಖೆಗಳು ಮಾತ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತವೆ. ಈ ಮೂರು ಇಲಾಖೆಗಳಿಗೆ ಹೊಸ ಕಂಪ್ಯೂಟರ್ ಹಾರ್ಡ್‌ವೇರ್ ನೀಡಲಾಗಿದೆ, ”ಎಂದು ಹೆಸರು ಹೇಳಲು ಬಯಸದ ಲೋಕಸಭೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಸತ್ತಿನ ಹೊಸ ಕಟ್ಟಡಕ್ಕೆ ಸೋಮವಾರದ ವೇಳೆಗೆ ಕೆಲವು ಕಚೇರಿಗಳು ಸ್ಥಳಾಂತರಗೊಳ್ಳ ಬಹುದು ಎಂದು ಹೆಸರು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
“ಎರಡು ತಿಂಗಳ ಹಿಂದೆ ಉದ್ಘಾಟನೆಯಾದ ಸಂಪೂರ್ಣ ಹೊಸ ಕಟ್ಟಡ ಕೇಂದ್ರ ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿದೆ. ಈಗ, ಸಂಸತ್ತಿನ ಭದ್ರತಾ ಅಧಿಕಾರಿಗಳು ಹೊಸ ಕಟ್ಟಡದ ಉಸ್ತುವಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ಹೊಸ ಸಂಸತ್ ಭವನಲೋಕಸಭೆ, ರಾಜ್ಯಸಭೆ, ಗ್ರಂಥಾಲಯ ಇರುವ ೬೫,೦೦೦ ಚ.ಮೀ ವಿಸ್ತೀರ್ಣದ ಹೊಸ ಕಟ್ಟಡದಲ್ಲಿ ನಿರ್ಮಾಣವಾಗಿದೆ. ಲೋಕಸಭೆ ಸ್ಪೀಕರ್ ಕಚೇರಿ ಈಗಿರುವ ಸಂಸತ್ ಭವನದಿಂದಲೇ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ