ಹೊಸ ಶಿಕ್ಷಣ ನೀತಿ ವಿರೋಧಿಸಿ ಎಐಡಿಎಸ್ ಓ ಪ್ರತಿಭಟನೆ

ಕಾಳಗಿ. ನ.11 : ಹೊಸ ಶಿಕ್ಷಣ ನೀತಿ ವಿರೋಧಿಸಿ ಹಾಗೂ ಶಿಕ್ಷಣದ ಖಾಸಗೀಕರಣ ವಿರೋಧಿಸಿ, ಶಿಕ್ಷಣದ ಅನುದಾನ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ವಿದ್ಯಾರ್ಥಿ ಸಂಘಟನೆಯು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 114ನೇ ಜನ್ಮವಾರ್ಷಿಕಕ್ಕೆ ಸಮರ್ಪಿಸಿ ಪಟ್ಟಣದ ಬಂಜಾರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ತಾಲೂಕ ಮಟ್ಟದ ವಿದ್ಯಾರ್ಥಿ ಸಮ್ಮೇಳನ ಜರಗಿತು.

ಪಟ್ಟಣದ ಬಸ್ ನಿಲ್ದಾಣದ ಎದುರು ಜಮಾಗೊಂಡ ನೂರಾರು ವಿದ್ಯಾರ್ಥಿಗಳು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದದ ವರೆಗೆ ವಿವಿಧ ಬೇಡಿಕೆಗಳ ನಾಮ ಫಲಕಗಳನ್ನು, ಮಹಾನ್ ವ್ಯಕ್ತಿಗಳ ಸೂಕ್ತಿಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬೃಹತ್ ಮೆರವಣಿಗೆ ಪಾಲ್ಗೊಂಡು ನಂತರ ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಭಾಗವಹಿಸಿದರು.

ಎಐಡಿಎಸ್‍ಓ ಜಿಲ್ಲಾ ಅಧ್ಯಕ್ಷರಾದ ಹಣಮಂತ ಎಸ್.ಎಚ್ ಅವರು ಕೋವಿಡ್ ಮಹಾಮಾರಿ ಸಂಕಷ್ಟದ ಸಂದರ್ಭದ ದುರುಪಯೋಗ ಪಡೆದ ಯಾವುದೇ ಪೂರ್ವ ಯೋಜನೆ ಇಲ್ಲದೆ ಅತ್ಯಂತ ಅಪ್ರಜತಾಂತ್ರಿಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಶಿಕ್ಷಣ ನೀತಿ ಜಾರಿಗೆ ಹಾತೊರೆಯುತ್ತಿವೆ. ಒಟ್ಟಾರೆ ಶಿಕ್ಷಣ ಇಂದು ಬಡ ಮಧ್ಯಮ ವರ್ಗದಿಂದ ವಂಚಿಸಿ ಕಾಪೆರ್Çರೇಟ್ ಕರಣ ಆಗುತ್ತಿರುವುದು ಖಂಡನೀಯ ಎಂದರು. ಇಂತ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಪ್ರಭಲ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಪ್ರೀಯದರ್ಶಿನಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಚಂದ್ರಶೇಖರ ಅವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಜೋತೆಗೆ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸಬೇಕು. ಜಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರ ಹೊಮ್ಮುವ ಮೂಲಕ ಸಮಾಜದ ಬದಲಾವಣೆಯನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊಯ್ಯುವ ಜವಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.

ಎಐಯುಟಿಯುಸಿ ಕೇಂದ್ರೀಯ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ ಶರ್ಮಾ ಮಾತನಾಡಿ ಶಿಕ್ಷಣ ದಿನೆ ದಿನೆ ವ್ಯಾಪಾರಿಕರಣಗೊಳ್ಳುತಿದ್ದು ರೈತ ಕಾರ್ಮಿಕರ ಕುಟುಂಬದ ಬಡ ಹಾಗು ಮದ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಸರ್ಕಾರಗಳೇ ಅನುವು ಮಾಡಿ ಕೊಡುತ್ತಿರುವುದು ಅತ್ಯಂತ ಖಂಡನೀಯ ಎಂದರು.

 ಜೊತೆಗೆ ನಗರದ ಬಂಜಾರ ಭವನದಲ್ಲಿ ನಡೆದ ಪ್ರತಿನಿಧಿ ಅಧಿವೇಶನದಲ್ಲಿ ಹಲವು ಸಮಸ್ಯೆಗಳ ಕುರಿತು ಗೊತ್ತುವಳಿಗಳನ್ನು ಮಂಡಿಸಲಾಯಿತು. ಅವುಗಳ ಕುರಿತು ವಿವರವಾಗಿ ಚರ್ಚಿಸಿ ಮತ್ತು ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರಭಲ ಹೋರಾಟ ಕಟ್ಟುವ ನಿಟ್ಟಿನಲ್ಲಿ ಎ.ಐ.ಡಿ.ಎಸ್.ಓ ತಾಲೂಕಿನ ನೂತನ ಸಮಿತಿ ಅಧ್ಯಕ್ಷರಾಗಿ ಶಿಲ್ಪಾ ಬಿ.ಕೆ, ಉಪಾಧ್ಯಕ್ಷರಾಗಿ ಭಾಗ್ಯಶ್ರೀ ಧಮ್ಮುರ್, ಕೃಷ್ಣ, ಕಾರ್ಯದರ್ಶಿಯಾಗಿ ರೇವಣಸಿದ್ದ, ಸಹ ಕಾರ್ಯದರ್ಶಿಯಾಗಿ ರಾಮು, ಆಕಾಶ, ಮಲ್ಲೇಶ್ ಹಾಗು ಸಮಿತಿ ಸದಸ್ಯರಾಗಿ ರಾಹುಲ್, ನಿಖಿಲ್, ದಶರಥ, ಸಚಿನ, ಶಮಾ, ಲತಾ, ಇಮ್ರಾನ್, ಸತೀಶ್, ಅಭಿಶೇಕ, ಶಿವರಾಜ, ಭಾಗೇಶ, ಭಗ್ಯವಂತ, ಕಾಶಿನಾಥ, ಶಿವಕುಮಾರ, ವಿರೇಶ ಸೇರಿದಂತೆ ಅನೇಕರಿದ್ದರು.