ಹೊಸ ಶಿಕ್ಷಣ ನೀತಿಯ ಕಾರ್ಯಾಗಾರ

 ಚಿತ್ರದುರ್ಗ. ನ.೩; ವರ್ಷದಲ್ಲಿ ನಾಲ್ಕು ತಿಂಗಳಿಗೆ ಎರಡು ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಡೀ ದೇಶದ ಸರ್ವತೋಮುಖದ ಅಭಿವೃದ್ಧಿಗೆ ತಾವೆಲ್ಲರೂ ಪಾತ್ರಧಾರಿಗಳು ಅಥವಾ ಪಾಲದಾರರು. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಎಲ್ಲರೂ ಶ್ರಮಪಟ್ಟು ಸದೃಢ ಭಾರತವನ್ನು ಕಟ್ಟಬೇಕು ಎಂದು ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಹೇಳಿದರು. ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ವಾವಲಂಬನೆಗಾಗಿ ಅತ್ಯುತ್ತಮ ಬದುಕನ್ನು ಕಟ್ಟಿಕೊಳ್ಳಲು  ಭದ್ರ ಬುನಾದಿಯಾಗಿದೆ.  ಬೇಸಿಕ್, ಡಿಜಿಟಲ್, ಕ್ರಿಯೇಟಿವ್ ಇತರ ಕೌಶಲ್ಯಗಳನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯಾಗಿದೆ. ಬೇಸಿಕ್ ಶಿಕ್ಷಣವಾಗಿರುವುದರಿಂದ ನಮ್ಮಂತಹ ಶಾಲೆಯಲ್ಲಿ ಗುಣಾತ್ಮಕವಾಗಿ ಕೊಡಲು ಅವಕಾಶವಿದೆಯೆಂದು ತಿಳಿಸಿದರು. ಟೈಲರಿಂಗ್, ಫ್ಯಾಶನ್ ಡಿಸೈನಿಂಗ್, ಮ್ಯೂಸಿಕ್ & ಡ್ಯಾನ್ಸ್, ಕಂಪ್ಯೂಟರ್ ಇಂತಹ ಸರ್ಟಿಫಿಕೇಟ್ ಕೋರ್ಸ್ ಹಾಗೂ ಸ್ಪೋಕನ್ ಇಂಗ್ಲೀಷ್ ಕೋರ್ಸ್ನ್ನು ಕೂಡ ಕಲಿಯಲು ನಮ್ಮಲ್ಲಿ ಅವಕಾಶವಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿರಬೇಕು ಎಂಬುದು ಓಇP ಮುಕ್ತವಾದ ಅವಕಾಶ ಕೊಟ್ಟಿದೆ. ಹಾಗಾಗಿ ವಿಷಯವನ್ನು ಸಂತೋಷಪಟ್ಟು ಕಲಿಯಬಹುದು.ಪ್ರಾಸ್ತಾವಿಕವಾಗಿ ಐಕ್ಯೂಎಸಿ ಸಂಚಾಲಕರಾದ ಎನ್. ಚಲುವರಾಜು ಮಾತನಾಡಿ ಭಾರತದಂತಹ ಯುವ ಜನತೆಯನ್ನು ಹೊಂದಿರುವ ಈ ದೇಶದಲ್ಲಿ ಹೊಸ ಶಿಕ್ಷಣ ನೀತಿ ಅತಿ ಅವಶ್ಯಕ. ಇದಕ್ಕಾಗಿ ಕೇಂದ್ರ ಸರ್ಕಾರ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇಸ್ರೋದ ಮಾಜಿ ಅಧ್ಯಕ್ಷರಾದ ಕಸ್ತೂರಿ ರಂಗನ್‌ರವರ ಅಧ್ಯಕ್ಷತೆಯಲ್ಲಿ ಓಇP 2020 ನ್ನು ಜಾರಿಗೆ ತಂದಿದೆ. ಇದು ಶಿಕ್ಷಣ ತಜ್ಞರಿಗೆ ಶಿಕ್ಷಕರಿಗೆ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳಿತೆ ಅತಿ ಅವಶ್ಯಕವಾಗಿದೆ. 1968ರಲ್ಲಿ ಮೊದಲನೇ ಕಮಿಷನ್ ಶಿಕ್ಷಣ ನೀತಿ ಜಾರಿಗೆ ಬಂದಿತು. 1986ರಲ್ಲಿ ಎರಡನೇ ಶಿಕ್ಷಣ ನೀತಿ ಜಾರಿಗೆ ತರಲಾಯಿತು. 2020ರಲ್ಲಿ ಈ ಹೊಸ ಶಿಕ್ಷಣ ನೀತಿಯನ್ನು ಈಗ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದರು.ವೇದಿಕೆಯಲ್ಲಿ ಪ್ರೊ. ಎಂ.ಎಸ್. ಪರಮೇಶ್ವರ, ಡಾ. ಸಿ. ಸುಧಾರಾಣಿ, ಶ್ರೀಮತಿ ಪಾರ್ವತಿ, ಶ್ರೀಮತಿ ಅನೀಸ್ ಫಾತೀಮ, ಶ್ರೀಮತಿ ಕಾವ್ಯ ಭಾರ್ಗವಿ, ಎನ್.ಆರ್. ಬಸವರಾಜ್, ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.