ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಮೌಲ್ಯಗಳನ್ನು ಸೇರಿಸುವಂತೆ ಪ್ರಯತ್ನಿಸೋಣ

ರಾಯಚೂರು.ಆ.೬-ಭಾರತ ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಿತ್ಯ ಪ್ರತಿಭೆ, ಪ್ರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದಲೆ ತಿಳಿಸುವ ಜವಾಬ್ದಾರಿಯಾಗಬೇಕು ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಮೌಲ್ಯಗಳನ್ನು ಸೇರಿಸುವಂತೆ ನಾವೆಲ್ಲ ಪ್ರಯತ್ನಿಸಬೇಕು ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಆಸಕ್ತಿ, ಕನಸು, ಪರಿಶ್ರಮ, ಸಂಸ್ಕೃತಿ ದೇಶದ ವಿಕಾಸದತ್ತ ಸಾಗಬೇಕು ಅಂತಹ ಪ್ರತಿಭೆಗಳನ್ನು ಪ್ರೊತ್ಸಾಹಿಸುತ್ತ ರಾಜ್ಯಮಟ್ಟ-ರಾಷ್ಟ್ರಮಟ್ಟಕ್ಕೆ ಕರೆದೊಯ್ಯಲು ರಾಯಚೂರು ವಿಶ್ವವಿದ್ಯಾಲಯ ಸದಾ ಸಿದ್ದ ಎಂದು ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ವಿದ್ಯಾ ವಿಷಯಕ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಹಳ್ಳೂರು ಮಾತನಾಡಿ, ನೈತಿಕ ಶಿಕ್ಷಣ, ಮೌಲ್ಯಗಳು, ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ. ಮೌಡ್ಯತೆ, ಅಜ್ಞಾನ ಹೆಚ್ಚುತ್ತಿದೆ. ಸಂಸ್ಕಾರ ಬಿಡದೆ ನೈತಿಕ ಶಿಕ್ಷಣ ಮೌಲ್ಯಗಳನ್ನು ಕಾಪಾಡಿಕೊಂಡು ಹೋದರೆ ವಿದ್ಯಾರ್ಥಿ ಜೀವನ ಅಸನಾಗುತ್ತದೆ ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ವಿದ್ಯಾ ವಿಷಯಕ ಪರಿಷತ್ ಸದಸ್ಯ ರಾಜಾ ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ತಮ್ಮಲ್ಲಿರುವ ಪ್ರತಿಭೆಯ ಮೂಲಕ ವಿಶ್ವವಿದ್ಯಾಲಯವನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು. ಸಿಂಡಿಕೇಟ್ ಸದಸ್ಯರಾದ ಹೆಚ್.ಜಗದೀಶ, ಸಂಜಯ್ ಕುಮಾರ್ ಮೂಥಾ, ಹಣಕಾಸು ಅಧಿಕಾರಿ ಪ್ರೊ.ಪಾರ್ವತಿ ಸಿ.ಎಸ್., ವೇದಿಕೆ ಮೇಲೆ ಉಪಸ್ಥಿತರಿದ್ದರು.
ರಾಯಚೂರು ವಿವಿಯ ಕುಲಸಚಿವ ಪ್ರೊ.ವಿಶ್ವನಾಥ ಎಂ. ಸ್ವಾಗತಿಸಿದರು, ಸ್ವಾತಂತ್ರ್ಯ ಅಮೃತ ಮಹೋತ್ಸವದ ನೋಡಲ್ ಅಧಿಕಾರಿ ಡಾ.ಜಿ.ಎಸ್.ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು, ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪನ್ನಗವೇಣಿ ಪ್ರಾರ್ಥಿಸಿದರು, ಕುಲಸಚಿವ ಮೌಲ್ಯಮಾಪನ ಪ್ರೊ.ಯರಿಸ್ವಾಮಿ ಎಂ. ವಂದಿಸಿದರು, ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕ ಹನುಮೇಶ ಮತ್ತು ಕನ್ನಡ ಅಧ್ಯಯನ ವಿಭಾಗ ಅತಿಥಿ ಉಪನ್ಯಾಸಕ ಡಾ.ಶಿವರಾಜ ಯತಗಲ್ ಪುಷ್ಪಗುಚ್ಛ ವಿತರಣ ಕಾರ್ಯಕ್ರಮ ನೆರವೇರಿಸಿದರೇ, ಡಾ.ಪುಷ್ಪಾವತಿ ಕಾರ್ಯಕ್ರಮ ಕುರಿತು ವರದಿ ವಾಚಿಸಿದರು. ರಸಾಯನಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಸೈಯ್ಯದಾ.ಫಜಲುನ್ನಿಸಾಬೇಗಂ ಮತ್ತು ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕಿ ವಿಜಯಲಕ್ಷ್ಮೀ ಬಾಬುಕಮಲ್ ನಿರೂಪಿಸಿದರು. ಡಾ.ಪದ್ಮಜಾ ದೇಸಾಯಿ ಮತ್ತು ಅನಿಲ್ ಅಪ್ರಾಳ್ ಬಹುಮಾನ ವಿತರಣ ಕಾರ್ಯಕ್ರಮ ನೆರವೇರಿಸಿದರು, ಡಾ.ಗೀತಮ್ಮ ಅಂಗಡಿ ಎಲ್ಲಾ ಸ್ಪರ್ಧೆಗಳಿಗಾಗಿ ಆಗಮಿಸಿದ ನಿರ್ಣಾಯಕರನ್ನು ಪರಿಚಯಿಸಿದರು.
ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸುಮಾರು ೫೦ ಮಹಾವಿದ್ಯಾಲಯಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವು. ಈ ಸಂದರ್ಭದಲ್ಲಿ ಸ್ಪರ್ಧೆಗಳ ಮೇಲ್ವಿಚಾರಕರಾಗಿ ಸ್ನಾತಕೋತ್ತರ ಕೇಮದ್ರದ ವಿಶೇಷಾಧಿಕಾರಿ ಪ್ರೊ.ಪಿ.ಭಾಸ್ಕರ್, ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ ಪ್ರೊ.ನುಸ್ರತ್ ಫಾತೀಮಾ, ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ ವಿವಿಧ ಕಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಪಾಲಕರು, ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.