ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ:ಉಪನ್ಯಾಸ

ಕಲಬುರಗಿ,ಸೆ.10-ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲೆಯಲ್ಲಿ ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣದ ಮಹತ್ವ ಕುರಿತು ಶಿಕ್ಷಣ ತಜ್ಞ ನರೇಂದ್ರ ಬಡಶೇಷಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ತಾಂತ್ರಿಕ, ವೈಜ್ಞಾನಿಕ ಮತ್ತು ಸಂಶೋಧನೆಯಲ್ಲಿ ಆಗುತ್ತಿರುವ ಬದಲಾವಣೆಯು ಪ್ರಗತಿಯ ಪಥದತ್ತ ಸಾಗಿರುವುದರಿಂದ ಉನ್ನತ ಶಿಕ್ಷಣದಲ್ಲಿಯೂ ಹೊಸ ಹೊಸ ಪಠ್ಯದ ಕ್ರಮ ಅನುಸರಿಸರಿಸಿ ಅಪ್ಡೇಟ್ ಆಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಆ ದಿಶೆಯಲ್ಲಿ ನಾವು ಹೆಜ್ಜೆ ಹಾಕೋಣ. ವಿದ್ಯಾರ್ಥಿಗಳು ಸಮಯ ವ್ಯಯ ಮಾಡದೆ ನಿರಂತರ ಓದಿನಲ್ಲಿ ತೊಡಗಲು ಕರೆ ಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ವಿದ್ಯಾರ್ಥಿ ಮಾರ್ಗದರ್ಶಕರಾದ ಉಮಾ ರೇವೂರ ವಂದಿಸಿದರು.