ಹೊಸ ವಿಚಾರ ಮೂಡಿಸುವ ಉದ್ದೇಶದಿಂದ ಪಠ್ಯ ಪರಿಷ್ಕರಣೆ 

ದಾವಣಗೆರೆ.ಜೂ.೧೮: ಮಕ್ಕಳಲ್ಲಿ ಹೊಸ ವಿಚಾರ ಮೂಡಿಸುವ ಸದುದ್ದೇಶದಿಂದ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಮಹಾಂತೇಶ್ ಲಕ್ಷ್ಮಣ ಅತ್ತಿ ತಿಳಿಸಿದರು. ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್ ಎಸ್ಸೆಸ್ ನವರ ವಿರುದ್ಧದ ದ್ವೇಷದಿಂದ ಪಠ್ಯ ಪರಿಷ್ಕರಣೆ ಮಾಡುತ್ತಿಲ್ಲ. ಶಿಕ್ಷಣದಲ್ಲಿ ರಾಜಕಾರಣ ಸಲ್ಲದು. ಆದರೂ, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರವರ್ತಿ ನೇತೃತ್ವದ ಸಮಿತಿ ಹಲವಾರು ಪಠ್ಯಗಳ ಸೇರಿಸುವ ಮೂಲಕ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದರು. ಶಿಕ್ಷಣ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ರಾಜ್ಯ ಸರ್ಕಾರದ ಅತೀ ಮಹತ್ವಾಕಾಂಕ್ಷೆ ಯ ಅನ್ನಭಾಗ್ಯ ಯೋಜನೆಗೆ ಹತ್ತು ಕೆಜಿ ಅಕ್ಕಿ ಕೊಡದೇ ಇರುವುದು ಖಂಡನೀಯ. ಕೇಂದ್ರ ಸರ್ಕಾರದ ಜೂ. 20 ರಂದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ರಂಜನ್ ಕುಮಾರ್, ಸುವರ್ಣಮ್ಮ, ನೀತಾ ನಂದೀಶ್ ಸುದ್ದಿಗೋಷ್ಠಿ‌ಯಲ್ಲಿದ್ದರು