ಹೊಸ ವರ್ಷ ಸಂಭ್ರಮ ಮೈಮರೆಯದಿರಿ – ನಾಯಕ

ಹುಬ್ಬಳ್ಳಿ,ಡಿ 31: ಹೊಸ ವರ್ಷವು ಹಿಂದೂಗಳಿಗೆ ಯುಗಾದಿಯಂದು ಹೊಸವರ್ಷವೆಂದು ಆಚರಿಸಲ್ಪಡುತ್ತೇವೆ, ಇತ್ತಿಚಿನ ದಿನಗಳಲ್ಲಿ ಎಲ್ಲ ಯುವಕರು ಡಿಸೆಂಬರ್ 31 ರ ರಾತ್ರಿ ಹೊವರ್ಷವೆಂದು ಆಚರಿಸಲ್ಪಡುತ್ತಾರೆ. ಕೇವಲ ಕ್ಯಾಲೆಂಡರ್ ಮಾತ್ರ ಬದಲಾವಣೆಯಾಗಿ ಕ್ಯಾಲೆಂಡರ್ ಹೊಸ ವರ್ಷವಾಗುತ್ತದೆ, ಆದ್ದರಿಂದ ಮುಖ್ಯವಾಗಿ ಯುವ ಜನಾಂಗ 2020 ರ ವರ್ಷವು ಭಯಂಕರ ಕೋರೊನಾ ವೈರಾಣು ರೋಗದಿಂದ ಜಗತ್ತಿನಾದ್ಯಂತ ಜನ ಸಾವು-ನೋವುಗಳು ಸಂಭವಿಸಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಎಲ್ಲ ರಿತಿಯಲ್ಲೂ ಪೆಟ್ಟು ಕೊಟ್ಟಿರುವ ಈ ಸಂದರ್ಭದಲ್ಲಿ ಮಾಸುವ ಮುನ್ನವೆ ಬ್ರಿಟನ್ ಮೂಲದ ವೈರಾಣು ದೇಶ ಹಾಗೂ ಜಗತ್ತಿನಾದ್ಯಂತ ಕಾಡುತ್ತಿದೆ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಹೊಸ ವರ್ಷ ಆಚರಣೆ ಗುಂಗಿನಲ್ಲಿ ನಾಗರಿಕರು ಮೈಮರೆತರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಈಗಾಗಲೆ ವೈದ್ಯಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದು, ಆದ ಕಾರಣ ನಗರದ ಜನತೆ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕೆಂದು ಬಿಜೆಪಿ ಮಹಾನಗರ ಜಿಲ್ಲಾ ವಕ್ತಾರರಾದ ರವಿ ನಾಯಕ ಮನವಿ ಮೂಲಕ ಎಚ್ಚರಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನಿಡಿದ್ದು ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸಲು ರವಿ ನಾಯಕ ವಿನಂತಿಸಿದ್ದಾರೆ.